ಪುತ್ತೂರು: ಪುತ್ತೂರಿನ ಬಜಾಜ್ ಚೇತಕ್ ಸ್ಕೂಟರ್ ನ ಪರಿಣತ ಮೆಕ್ಯಾನಿಕ್ ಪೋಳ್ಯ ವಿಷ್ಣು ಭಟ್ ಹಾರಾಡಿ (71 ವ.) ನಿಧನರಾದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೃತರು ಮಾ.12 ರಂದು ನಿಧನರಾದರು. ವಿಷ್ಣು ಭಟ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.
ಮೃತರು ಪತ್ನಿ ಜಯಲಕ್ಷ್ಮೀ, ಪುತ್ರ ಬೆಂಗಳೂರಿನಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿರುವ ಶ್ಯಾಮ್ ಪ್ರಕಾಶ್, ಪುತ್ರಿಯರಾದ ದಿವ್ಯಾ ಹಾಗೂ ದೀಕ್ಷಾ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.
ಇಂದು ಅಂತ್ಯಕ್ರಿಯೆ: ಮೃತದೇಹ ಬೆಂಗಳೂರಿನಿಂದ ಪುತ್ತೂರಿಗೆ ತಂದು (ಮಾ.13) ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವ ತಿಳಿಸಿದ್ದಾರೆ.