Friday, November 22
Share News

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸನಿಹದ ಏನೇಕಲ್’ನಲ್ಲಿ ನೂತನವಾಗಿ ದಿ ರಾಯಲ್ ಮೊಂಟಾನಾ ಹೋಟಲ್ ಮತ್ತು ರೆಸಾರ್ಟ್ ಏಪ್ರಿಲ್ 3ರಂದು ಶುಭಾರಂಭಗೊಂಡಿತು.

ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಈ ಭಾಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಈ ರೆಸಾರ್ಟ್ ಮತ್ತು ಹೋಟೆಲ್ ಅನುಕೂಲ ಆಗಲಿ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಲಿ ಎಂದು ಅವರು ಹೇಳಿದರು.

ಖ್ಯಾತ ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ, ಕತಥ್ ನೃತ್ಯ ಕಲಾವಿದೆ ಆಲಿ ಶರ್ಮ ಅತಿಥಿಗಳಾಗಿದ್ದರು. ದಿ ರಾಯಲ್ ಮೊಂಟಾನಾ ಹೋಟೆಲ್ ಮತ್ತು ರೆಸಾರ್ಟ್ ಸಂಸ್ಥಾಪಕರಾದ ಹರ್ಷ ಕುಟ್ಟಪ್ಪ, ರೂಪ ಹರ್ಷ, ನಿರ್ದೇಶಕರಾದ ಧನುಶ್ರೀ, ಗಗನ್ ಹರ್ಷ, ಸಂಸ್ಥೆಯ ವ್ಯವಸ್ಥಾಪಕರಾದ ರುಬೆಲ್ ಮತ್ತಿತರರು ಉಪಸ್ಥಿತರಿದ್ದರು. ‌

ಸಂಸ್ಥೆಯ ಶುಭಾರಂಭದ ಪ್ರಯುಕ್ತ ಗಣಪತಿ ಹವನ, ಲಕ್ಷ್ಮೀ ಪೂಜೆ, ವಾಸ್ತು ಪೂಜೆ, ಸುದರ್ಶನ ಹೋಮ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.

ಪ್ರವಾಸಿಗರ ಹೊಸ ಡೆಸ್ಟಿನೇಷನ್:

ಪ್ರವಾಸಿಗರ ಹೊಸ ಡೆಸ್ಟಿನೇಷನ್ ‘ದಿ ರಾಯಲ್ ಮೊಂಟಾನಾ’ ಹೋಟೆಲ್ & ರೆಸಾರ್ಟ್ ಇದೀಗ ಕುಕ್ಕೆ ಸುಬ್ರಹ್ಮಣ್ಯದ ಸನಿಹದ ಏನೆಕಲ್ಲಿನಲ್ಲಿ
ಪ್ರಾರಂಭವಾಗಿಲಿದೆ.ಕುಕ್ಕೆ ಸುಬ್ರಹ್ಮಣ್ಯ ಮತ್ತಿತರ ಯಾತ್ರಾ ತಾಣಗಳಿಗೆ ಬರುವ ಪ್ರವಾಸಿಗರಿಗೆ ಅಲ್ಲಿಂದ ಕೇವಲ ಆರು ಕಿ.ಮೀ. ದೂರದ ಏನೆಕಲ್ಲು ಗ್ರಾಮದಲ್ಲಿ ಸುಂದರ ರೆಸಾರ್ಟ್‌ ಕೈಬೀಸಿ ಕರೆಯುತ್ತಿದೆ. ಅದುವೇ ಡಿ ರಾಯಲ್ ಮೊಂಟಾನಾ’. ಸುಬ್ರಹ್ಮಣ್ಯ– ಪುತ್ತೂರು ರಸ್ತೆಯಲ್ಲಿ ಏನೆಕಲ್ಲು ಎಂಬ ಕಾನನದೊಳಗೆ ಹುದುಗಿದ ಊರು ಸಿಗುತ್ತದೆ. ಅದರ ಸಮೀಪದಲ್ಲೇ ಇದೆ ಬೂದಿಪಳ್ಳ ಎಂಬ ಹಸಿರು ಹೊದಿಕೆ ಹೊದ್ದ ಸುಂದರ ಪ್ರದೇಶ. ಅಲ್ಲಿಯೇ ಹೊಸದಾಗಿ ಆರಂಭಗೊಂಡಿದೆ ಡಿ ರಾಯಲ್ ಮೊಂಟಾನಾ ಹೋಟೆಲ್ & ರೆಸಾರ್ಟ್. ಕುಮಾರಧಾರಾ ಸ್ನಾನಘಟ್ಟದಿಂದ ಇಲ್ಲಿಗೆ ಇರುವ ದೂರ ಕೇವಲ 5 ಕಿ.ಮೀ. ಮಾತ್ರ.ಮೂರು ಎಕರೆ ಪ್ರದೇಶದಲ್ಲಿ ವಿಶಾಲವಾಗಿ ವ್ಯಾಪಿಸಿಕೊಂಡಿರುವ ಹಾಗೂ ಪ್ರಕೃತಿ ತನ್ನ ಸೌಂದರ್ಯವೆಲ್ಲವನ್ನೂ ಇಲ್ಲೇ ಅನಾವರಣಗೊಳಿಸುವ ರೀತಿಯ ಲ್ಯಾಂಡ್‌ಸ್ಕೇಪ್‌ ಪರಿಕಲ್ಪನೆಯಲ್ಲಿ ಈ ಹೋಟೆಲ್ & ರೆಸಾರ್ಟ್‌ ನಿರ್ಮಾಣವಾಗಿದೆ. ಯಾತ್ರಿಕರ ಜತೆಗೆ ಪ್ರವಾಸಿಗರಿಗೆ ಉತ್ತಮ ಸೌಲಭ್ಯದ ಊಟ, ವಸತಿ, ಮನರಂಜನೆ, ಮಕ್ಕಳಿಗೆ ಆಟವಾಡುವ ಸ್ಥಳ, ಈಜುಕೊಳ ಸಹಿತ ಎಲ್ಲಾ ಸೌಲಭ್ಯಗಳೂ ಒಂದೇ ಕಡೆ ಸಿಗಬೇಕು ಎಂಬ ಪರಿಕಲ್ಪನೆಯೊಂದಿಗೆ ಅತ್ಯುತ್ತಮವಾಗಿ ತಲೆ ಎತ್ತಿ ನಿಂತಿದೆ ಏನೆಕಲ್ಲಿನ ಈ ಹೊಸ ಪ್ರವಾಸಿ ನೆಲೆ. ಆಧುನಿಕ ರೆಸಾರ್ಟ್‌ಗಳಲ್ಲಿ ಇರುವಂತಹ ಲಾನ್‌ ಏರಿಯಾ, ಪ್ಯಾಂಟ್ರಿ ಹೌಸ್‌, ಬ್ಯಾಂಕ್ವೆಟ್‌ ಹಾಲ್‌, ಎಸಿ ಡೈನಿಂಗ್ ಹಾಲ್‌ ಸಹಿತ ಊಟ, ಉಪಾಹಾರ, ಪಾನೀಯ ಸೇವನೆ, ವಿಶ್ರಾಂತಿ, ವಾಕಿಂಗ್‌, ಸ್ವಿಮ್ಮಿಂಗ್‌..ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಒಂದು ಬಾರಿ ಬಂದರೆ ಹೊರ ಪ್ರಪಂಚದ ಜಂಜಾಟಗಳನ್ನು ಮರೆತುಬಿಟ್ಟು ಹಾಯಾಗಿ ಒಂದೆರಡು ದಿನ ಇಲ್ಲೇ ಕಾಲ ಕಳೆಯುವ ಮನಸ್ಸು ಮಾಡುವುದು ನಿಶ್ಚಿತ.

ರೆಸಾರ್ಟ್‌ನಲ್ಲಿ ಒಟ್ಟು 29 ಕೊಠಡಿಗಳಿವೆ. ಎಸಿ ಮತ್ತು ನಾನ್ ಎಸಿ ಕೊಠಡಿಗಳಿದ್ದು, ಎಲ್ಲವೂ ವಿಶಾಲವಾಗಿವೆ, ಶುಚಿಯಾಗಿವೆ. 6 ಕಾಟೇಜ್‌ಗಳಿದ್ದು, ಮಡಿಕೇರಿಯ ಅನುಭವವನ್ನು ಈ ಕಾಟೇಜ್‌ಗಳು ಕುಕ್ಕೆಯ ಪರಿಸರದಲ್ಲಿ ನೀಡತ್ತವೆ. ಬಿರು ಬೀಸಿಗೆಯಲ್ಲೂ ಕಾಡೊಳಗಿಂದ ಹರಿದು ಬರುವ ಜಲಜಲಲ ಜಲಧಾರೆ ಇಲ್ಲಿನ ಜೀವಜಲ. ಜತೆಗೆ ಕೊಳವೆಬಾವಿಯಲ್ಲೂ ನೀರು ಲಭ್ಯ ಇದೆ. 100ಕ್ಕೂ ಅಧಿಕ ಕಾರುಗಳ ನಿಲುಗಡೆಗೆ ಇಲ್ಲಿ ಅವಕಾಶ ಇದೆ. ಮದುವೆ, ಅತಿಥಿ ಸತ್ಕಾರ, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಹಿತ ಸ್ನೇಹಿತರು, ಬಂಧುಬಳಗ ಸೇರಿಕೊಂಡು ಸಮಯ ಕಳೆಯಲು ಇಲ್ಲಿ ಸಾಕಷ್ಟು ಅವಕಾಶ ಇದೆ. ಮದುವೆಯಲ್ಲಿ ಒಂದು ಸಾವಿರ ಮಂದಿಯನ್ನು ನಿಭಾಯಿಸಬಹುದಾದಷ್ಟು ಸ್ಥಳಾವಕಾಶ ಇದ್ದು, ಅದಕ್ಕಾಗಿ ಸುಂದರ ಲಾನ್ ನಿರ್ಮಾಣವಾಗಿದೆ. ಸಣ್ಣ ಪಾರ್ಟಿಗಳಿಗೆ ಸುಮಾರು 400 ಜನರಿಗೆ ಅವಕಾಶ ಇರುವ ಪಾರ್ಟಿ ಹಾಲ್ ಸಹ ಇದೆ.

ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಿಯರು ಇಷ್ಟಪಡುವ ನಾನಾ ಬಗೆಯ ಕರಾವಳಿ ಮತ್ತು ಇತರ ಎಲ್ಲಾ ಬಗೆಯ ಅಡುಗೆಯನ್ನೂ ಸಿದ್ಧಪಡಿಸಿ ಬಡಿಸುವ ಎರಡು ಪ್ರತ್ಯೇಕ ಹೋಟೆಲ್‌ಗಳು ಇಲ್ಲಿವೆ. ಸಸ್ಯಾಹಾರಿ ಹೋಟೆಲ್‌ಗೆ ‘ಪುಳಿಚಾರ್ ವೆಜ್‌ ರೆಸ್ಟೋರೆಂಟ್‌’ ಎಂಬ ಹೆಸರು ಇಡಲಾಗಿದ್ದರೆ, ನಾನ್‌ವೆಜ್‌ ಹೋಟೆಲ್‌ಗೆ ‘ಪ್ಯಾರಡೈಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌’ ಎಂಬ ಹೆಸರು ಇಡಲಾಗಿದೆ. ಎರಡಕ್ಕೂ ಪ್ರತ್ಯೇಕ ಕಿಚನ್‌ಗಳು ಇರುವುದು ವಿಶೇಷ. ಈ ಭಾಗದ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಆಸ್ವಾದಿಸಲು ಬರುವವರಿಗೆ ಈ ಭಾಗದಲ್ಲಿ ನಾಲ್ಕಾರು ದಿನಗಳನ್ನು ನೆಮ್ಮದಿಯಾಗಿ ಕಳೆಯಲು ದಿ ರಾಯಲ್ ಮೊಂಟಾನಾ ರೆಸಾರ್ಟ್ ಅತ್ಯುತ್ತಮ ತಾಣ ಎಂದು ಎಂದು ದಿ.ರಾಯಲ್‌ ಎಂಟರ್‌ಪ್ರೈಸಸ್‌ನ ಚೆಯರ್‌ಮೆನ್ ಹರ್ಷ ಪುಟ್ಟಪ್ಪ ತಿಳಿಸಿದ್ದಾರೆ.


Share News

Comments are closed.

Exit mobile version