Friday, November 22
Share News

ನೃತ್ಯ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ 2024- 2025ರ ಉದ್ಘಾಟನಾ ಸಮಾರಂಭ ಕಲ್ಲಡ್ಕದಲ್ಲಿ ಜರಗಿತು

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಯಕ್ಷಬೊಳ್ಳಿ ದಿನೇಶ್ ರೈ ಕಡಬ ಹಾಗೂ ಉದ್ಯಮಿ ಕಿಶೋರ್ ಕುಮಾರ್ ಕಟ್ಟೆಮಾರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ದಿನೇಶ್ ರೈ ಕಡಬ ಮಾತನಾಡಿ, ಎಲ್ಲಾ ಕಲಾವಿದರಿಗೆ ಐಡಿಯ ಸೌಲಭ್ಯ ಸರಕಾರದಿಂದ ಇದೆ. ನೃತ್ಯ ಕಲಾವಿದರಿಗೆ ಇದರ ಸೌಲಭ್ಯ ಸಿಗುವಂತಗಾಲಿ ಎಂದರು. ಕಿಶೋರ್ ಕಟ್ಟೆಮಾರು ಶುಭ ಹಾರೈಸಿದರು.

ಮುಖ್ಯ ಅತಿಥಿ ಅನುದನಿತಾ ಹಿರಿಯ ಪ್ರಾಥಮಿಕ ಶಾಲೆ ಮಾಯಿದೆ ದೆವುಸ್‌ ಮುಖ್ಯೋಪಾಧ್ಯಾಯಿನಿ ಜಾನೆಟ್ ಡಿ ‘ಸೋಜ ನೃತ್ಯ ಕಲಾವಿದರ ಒಕ್ಕೂಟ ನಮ್ಮ ಶಾಲೆಯಿಂದಲೆ ಆರಂಭಗೊಂಡಿದೆ ಎಂದು ಹೇಳೋದಕ್ಕೆ ನಮಗೆ ಹೆಮ್ಮೆಯ ವಿಷಯ.ಈ ಒಕ್ಕೂಟ ಎಲ್ಲ ಕಲಾವಿದರಿಗೂ ತಲುಪುವಂತಾಗಾಲಿ ಎಂದರು.

ಮತ್ತೊರ್ವ ಅಥಿತಿ ಹಾಗೂ ನೃತ್ಯ ಕಲಾವಿದ ಗೌರವಧ್ಯಕ್ಷ ರಾಜೇಶ್ ವಿಟ್ಲ ಒಕ್ಕೂಟಕ್ಕೆ ಎಲ್ಲಾ ಕಲಾವಿದರು ಒಗ್ಗಟ್ಟಾಗಿ ಕೈ ಜೋಡಿಸಬೇಕು ಎಂದರು.ನೃತ್ಯ ನಿರ್ದೇಶಕ ರಾಜೇಶ್ ಕಣ್ಣೂರು ಇದೊಂದು ಉತ್ತಮವಾದ ನೃತ್ಯ ಕಲಾವಿದರ ಒಕ್ಕೂಟ ಇದರ ಸದುಪಯೋಗ ಪಡೆದುಕೊಳ್ಳಿ ಹಾಗೂ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.

ಚಲನಚಿತ್ರ ನಟ ಮನೀಶ್ ಶೆಟ್ಟಿ ಉಪ್ಪಿರ ಮಾತನಾಡಿ ನಾನು ಮೊದಲಾಗಿ ಬೊಂಬೆ ಕಲಾವಿದನಾಗಿ ದುಡಿದಿದ್ದೇನೆ ಅದರ ಕಷ್ಟ ಏನೂ ಎಂದು ಅರಿತವ. ಈ ಒಕ್ಕೂಟದಲ್ಲಿ ಗೊಂಬೆ ಕಲಾವಿದರಿಗೂ ಅವಕಾಶ ಕೊಟ್ಟಿದ್ದಾರೆ ಖಂಡಿತ ಯಶಸ್ವಿಯ ತುತ್ತತುದಿ ತಲುಪುತ್ತದೆ ಎಂದರು.

ಮೇಘ ಕಲಾ ಆರ್ಟ್ಸ್ ಡಾನ್ಸ್ ಸ್ಟುಡಿಯೋ ಇದರ ಶಾರದಾ ದಾಮೋದರ ಅರತ್ತೋಳಿ ಮಾತನಾಡಿ ನೃತ್ಯ ಕಲಾವಿದರ ಒಕ್ಕೂಟ ಮತ್ತು ಗೊಂಬೆ ಕಲಾವಿದರಿಗೆ ಕಲಾವಿದರಾಗಿ ಅವರು ದುಡಿದು ಮನೆಗೆ ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಕಲಾವಿದರ ಕಷ್ಟ ಸರ್ಕಾರಕ್ಕೆ ತಿಳಿದು ಪರಿಹಾರ ದೊರಕುವಂತಾಗಲಿ ಎಂದರು.

ಜಿ ವೀ ರೋಕಾರ್ಸ್‌ ಡಾನ್ಸ್ ಅಕಾಡೆಮಿ ಕಡೇಶಿವಾಲಯ ನೃತ್ಯ ನಿರ್ದೇಶಕ, ಒಕ್ಕೂಟದ ಅಧ್ಯಕ್ಷ ಚಂದ್ರೋದಯ ಕುಲಾಲ್ ಎಲ್ಲರ ಸಹಕಾರದಿಂದ ಈ ಒಂದು ಒಕ್ಕೂಟ ನಿರ್ಮಾಣ ಸಾಧ್ಯವಾಯಿತು ಎಂದರು. ಮಯೂರ ಕಲಾ ಸಂಸ್ಥೆ ನೃತ್ಯ ನಿರ್ದೇಶಕ ಮೋಹನ್ ಅಲಂಕಾರು ಸ್ವಾಗತಿಸಿ,ಚಿಂತಾಮಣಿ ಡಾನ್ಸ್ ಅಕಾಡೆಮಿ ಕಲ್ಲಡ್ಕ, ಕಡೇಶಿವಾಲಯ ನೃತ್ಯ ನಿರ್ದೇಶಕ ಮಹೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Share News

Comments are closed.

Exit mobile version