ಅಪಘಾತ

ಮಂಗಳೂರು: ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಕುಪ್ಪೆಪದವು-ಕಲ್ಲಾಡಿ-ಪೂವಣಿಬೆಟ್ಟು-ಮಂಗಳೂರು ಮಾರ್ಗದಲ್ಲಿ ಬುಧವಾರ ಸಂಭವಿಸಬಹುದಾಗಿದ್ದ ಭಾರೀ ಅಪಘಾತವೊಂದು ಖಾಸಗಿ ಬಸ್ ಚಾಲಕನ ಜಾಗರೂಕತೆ ಮತ್ತು ಸಮಯೋಚಿತ ನಿರ್ಧಾರದಿಂದ ಕೂದಲೆಳೆ ಅಂತರದಲ್ಲಿ ತಪ್ಪಿದೆ.

chennai-shopping
maithri

ಕುಪ್ಪೆಪದವಿನಿಂದ ಕಲ್ಲಾಡಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನೇರಳಿಕೆಯಲ್ಲಿನ ಕೆಳಮುಖ ತಿರುವು ಪಡೆಯುವ ವೇಳೆ ಅಕಸ್ಮಾತ್ತಾಗಿ ಬ್ರೇಕ್ ವೈಫಲ್ಯಕ್ಕೆ ಒಳಗಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ತಕ್ಷಣವೇ ಅರಿತ ಚಾಲಕ ವಾಸು ಅಲಿಯಾಸ್ ಅಮ್ಮಿ ಅವರು, ಬಸ್ಸನ್ನು ಬಲಭಾಗದಲ್ಲಿರುವ ಗುಡ್ಡದ ಅಂಚಿನ ಚರಂಡಿಯ ಕಡೆಗೆ ತಿರುಗಿಸಿದರು. ಪರಿಣಾಮವಾಗಿ ಬಸ್ಸಿನ ಚಕ್ರಗಳು ಚರಂಡಿಯಲ್ಲಿ ಸಿಲುಕಿಕೊಂಡು ದೊಡ್ಡ ಅಪಘಾತ ಸಂಭವಿಸುವುದು ತಪ್ಪಿತು.

ಘಟನೆ ಸಂಭವಿಸಿದ ವೇಳೆಗೆ ಬಸ್ ಕುಪ್ಪೆಪದವಿನಿಂದ ಪೂವಣಿಬೆಟ್ಟು ಕಡೆಗೆ ಸಾಗುತ್ತಿದ್ದು, ಕೆಲವೇ ಪ್ರಯಾಣಿಕರು ಮಾತ್ರ ಬಸ್ಸಿನಲ್ಲಿದ್ದರು. ರಸ್ತೆಯ ಎಡಭಾಗದಲ್ಲಿ ತಗ್ಗು ಪ್ರದೇಶದಲ್ಲಿ ಹಲವು ಮನೆಗಳು ಇರುವುದನ್ನು ಗಮನಿಸಿದ ಚಾಲಕ, ಆ ದಿಕ್ಕಿಗೆ ಬಸ್ ಸಾಗದಂತೆ ಎಚ್ಚರಿಕೆಯಿಂದ ನಿರ್ಧಾರ ಕೈಗೊಂಡು, ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿದರು.

ಚಾಲಕನ ಸಕಾಲಿಕ ಕ್ರಮದಿಂದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಆದರೆ ಬಸ್‌ಗೆ ಮಾತ್ರ ಸ್ವಲ್ಪ ಹಾನಿಯಾಗಿದೆ. ಚಾಲಕನ ಧೈರ್ಯ, ಜವಾಬ್ದಾರಿ ಮತ್ತು ಸಮಯೋಚಿತ ನಿರ್ಧಾರಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನಂತರ ಹಾನಿಗೊಳಗಾದ ಬಸ್‌ನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿ ರಸ್ತೆಬದಿಗೆ ಸ್ಥಳಾಂತರಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts