ಅಪಘಾತ

ಕಡಿದ ವಿದ್ಯುತ್ ತಂತಿಗೆ ಬಲಿಯಾಯ್ತು 900 ಅಡಿಕೆ ಗಿಡ!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು, 900ರಷ್ಟು ಅಡಿಕೆ ಗಿಡಗಳು ಸುಟ್ಟುಕರಕಲಾದ ಘಟನೆ ಪುತ್ತೂರಿನ ಕುರಿಯದಲ್ಲಿ ನಡೆದಿದೆ.

chennai-shopping
maithri

ಬೂಡಿಯಾರ್ ಗಣೇಶ್ ರೈ ಎಂಬವರ ತೋಟದಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಬಿದ್ದ ತಕ್ಷಣ ಒಣಗಿದ್ದ ಅಡಿಕೆ ತೋಟಕ್ಕೆ ಬೆಂಕಿ ಹೊತ್ತಿಕೊಂಡಿದ್ದು. ಸುಮಾರು 900ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಬೆಂಕಿ ಆಹುತಿ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಇದರಿಂದಾಗಿ ದೊಡ್ಡ ಪ್ರಮಾಣದ ನಷ್ಟ ಸಂಭವಿಸುವುದು ತಪ್ಪಿದೆ.

ಎಪಿಎಂಸಿ ಮಾಜಿ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ ಸೇರಿದಂತೆ ಹಲವು ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts