Gl
ಅಪಘಾತ

ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ; ಓರ್ವ ಪ್ರಯಾಣಿಕ ಮೃತ್ಯು!

GL

ಈ ಸುದ್ದಿಯನ್ನು ಶೇರ್ ಮಾಡಿ

ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ದುವ್ವಾಡ ಮೂಲಕ ಹಾದುಹೋಗುತ್ತಿದ್ದ ಟಾಟಾ ನಗರ–ಎರ್ನಾಕುಲಂ (18189) ಎಕ್ಸ್‌ ಪ್ರೆಸ್‌ ರೈಲಿನಲ್ಲಿ ಸೋಮವಾರ ಬೆಳಗಿನ ಜಾವ ಭಾರೀ ಬೆಂಕಿ ಕಾಣಿಸಿಕೊಂಡಿದ್ದು,

core technologies

ಈ ದುರಂತದಲ್ಲಿ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದಾರೆ. ಮೃತರನ್ನು ವಿಜಯವಾಡ ನಿವಾಸಿ ಚಂದ್ರಶೇಖರ್ ಸುಂದರ್ (70) ಎಂದು ಗುರುತಿಸಲಾಗಿದೆ. ಅವರು ಬಿ1 ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಬೆಳಗಿನ ಜಾವ 1.30ರ ಸುಮಾರಿಗೆ ಪ್ಯಾಂಟ್ರಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು, ಅದು ಪಕ್ಕದ ಬಿ1 ಹಾಗೂ ಎಸಿ ಬೋಗಿಗಳಿಗೆ ವೇಗವಾಗಿ ಹರಡಿತು. ಎಲಮಂಚಿಲಿ ಸಮೀಪ ಹೊಗೆ ಕಂಡುಬಂದ ತಕ್ಷಣ ಲೋಕೋ ಪೈಲಟ್‌ ಗಳು ರೈಲನ್ನು ಹತ್ತಿರದ ನಿಲ್ದಾಣದಲ್ಲಿ ನಿಲ್ಲಿಸಿದರೂ, ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಎರಡು ಬೋಗಿಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದ್ದವು.

ರೈಲು ಅನಕಪಲ್ಲಿಗೆ ಸುಮಾರು ನಾಲ್ಕು ಗಂಟೆಗಳ ತಡವಾಗಿ ತಲುಪಿತು. ನಂತರ ನರಸಿಂಗಬಳ್ಳಿ ಬಳಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಬಿ1 ಬೋಗಿಯಲ್ಲಿ ಬ್ರೇಕ್ ಜಾಮ್ ಆಗಿರುವುದೇ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಚಳಿಗಾಲದ ತೀವ್ರ ಚಳಿ ನಡುವೆಯೇ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಸುಮಾರು 2,000 ಪ್ರಯಾಣಿಕರು ನಿಲ್ದಾಣದಲ್ಲೇ ಸಿಲುಕಿಕೊಂಡರು. ಘಟನೆಯಿಂದ ವಿಶಾಖಪಟ್ಟಣ–ವಿಜಯವಾಡ ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಬೆಳಗಿನ ಜಾವ 3.30ರ ಸುಮಾರಿಗೆ ಸುಟ್ಟುಹೋದ ಬೋಗಿಗಳನ್ನು ಬೇರ್ಪಡಿಸಿ, ಉಳಿದ ಬೋಗಿಗಳಲ್ಲಿ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಿ ರೈಲನ್ನು ಮುಂದುವರಿಸಲು ಅಧಿಕಾರಿಗಳು ಅನುಮತಿ ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts