ಖಾಸಗಿ ಬಸ್ ಗೆ ಆಕಸ್ಮಿಕ ಬೆಂಕಿ ಹೊತ್ತಿಗೊಂಡ ಪರಿಣಾಮ ಸುಮಾರು 20 ಪ್ರಯಾಣಿಕರು ಸಜೀವ ದಹನವಾದ ಘಟನೆ ಜೈಪುರದ ಎಸ್‌ಎಂಎಸ್ ಆಸ್ಪತ್ರೆ ಸಮೀಪದಲ್ಲಿ ಸಂಭವಿಸಿದೆ.
ಬಸ್ ಜೈಸಲ್ಮೀರ್‌ನಿಂದ ಜೋಧಪುರಕ್ಕೆ ಹೊರಟಿದ್ದು, ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
57 ಪ್ರಯಾಣಿಕರಿದ್ದ ಬಸ್, ಮಧ್ಯಾಹ್ನ 3ರ ಸುಮಾರಿಗೆ ಜೈಸಲ್ಮೀರ್‌ನಿಂದ ಹೊರಟಿದೆ. ದಾರಿ ಮಧ್ಯೆ ಬಸ್‌ನ ಹಿಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಸ್‌ನ್ನು ರಸ್ತೆ ಪಕ್ಕ ನಿಲ್ಲಿಸಲು ಚಾಲಕ ಮುಂದಾಗುತ್ತಿದ್ದ ವೇಳೆಯೇ, ಬೆಂಕಿಯು ಇಡೀ ಬಸ್‌ಗೆ ವ್ಯಾಪಿಸಿಕೊಂಡಿದೆ. ಜೈಸಲ್ಮೀರ್‌ನಿಂದ ಹೊರಟ 10 ನಿಮಿಷಗಳ ಬಳಿಕ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
19 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರೆ, ಅಸ್ವಸ್ಥಗೊಂಡಿದ್ದ ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

























