ಮಹಾರಾಷ್ಟ್ರದ ಪಾಲ್ಸರ್ ಜಿಲ್ಲೆಯ ವಿರಾರ್‌ನಲ್ಲಿ ನಾಲ್ಕು ಅಂತಸ್ತಿನ ಹಳೆಯ ಕಟ್ಟಡವೊಂದು ಕುಸಿದು ಬಿದ್ದು ಒಂದು ವರ್ಷದ ಮಗು ಸೇರಿದಂತೆ 15 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಇನ್ನೂ ಕೆಲವರು ನಾಪತ್ತೆಯಾಗಿದ್ದು ರಕ್ಷಣಾ ತಂಡ ಅವಶೇಷಗಳಡಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಗಳ ಹುಟ್ಟುಹಬ್ಬ ಆಚರಿಸುವ ವೇಳೆ ದುರಂತ:
ವಿಜಯ್ ನಗರದಲ್ಲಿರುವ ರಮಾಬಾಯಿ ಅಪಾರ್ಟ್‌ಮೆಂಟ್‌ನ ಒಂದು ಭಾಗ ಕುಸಿದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ ಈ ವೇಳೆ ಆರೋಹಿ ಜೋಯಲ್ ಮತ್ತು ಓಂಕಾರ್ ಜೋಯಲ್ ದಂಪತಿಯ ಒಂದು ವರ್ಷದ ಮಗಳಾದ ಉತ್ಕರ್ಷ ಜೋಯಲ್ ನ ಹುಟ್ಟುಹಬ್ಬ ವಾಗಿದ್ದರಿಂದ ದಂಪತಿ ಮಂಗಳವಾರ ಮಧ್ಯರಾತ್ರಿ ಸುಮಾರು 12:05 ರ ವೇಳೆಗೆ ಮಗಳ ಮೊದಲ ವರ್ಷದ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು ಈ ವೇಳೆ ಏಕಾಏಕಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ ಘಟನೆಯಲ್ಲಿ ಒಂದು ವರ್ಷದ ಮಗು, ತಾಯಿ ಸೇರಿದಂತೆ ಹದಿನೈದು ಮಂದಿ ಜೀವ ಕಳೆದುಕೊಂಡಿದ್ದು ತಂದೆ ಓಂಕಾರ್ ಜೋಯಲ್ ನಾಪತ್ತೆಯಾಗಿದ್ದಾರೆ.
ಮನೆಯ ಗೋಡೆಗಳಲ್ಲಿ ಬಲೂನ್ ಗಳನ್ನು ಹಾಕಿ ಅಲಂಕಾರ ಮಾಡಿರುವುದು ಕಂಡುಬಂದಿದ್ದು ಜೊತೆಗೆ ಅವರ ಮೊಬೈಲ್ ನಲ್ಲಿ ಹುಟ್ಟು ಹಬ್ಬ ಆಚರಿಸಿರುವ ಫೋಟೋಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯ ಗೋಡೆಗಳಲ್ಲಿ ಬಲೂನ್ ಗಳನ್ನು ಹಾಕಿ ಅಲಂಕಾರ ಮಾಡಿರುವುದು ಕಂಡುಬಂದಿದ್ದು ಜೊತೆಗೆ ಅವರ ಮೊಬೈಲ್ ನಲ್ಲಿ ಹುಟ್ಟು ಹಬ್ಬ ಆಚರಿಸಿರುವ ಫೋಟೋಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯಂತೆ ನಾಲ್ಕು ಅಂತಸ್ತಿನ ಅಕ್ರಮ ಕಟ್ಟಡವೊಂದು ಮಂಗಳವಾರ ತಡರಾತ್ರಿ ಕುಸಿದು ಬಿದ್ದಿದೆ ಪರಿಣಾಮ ಅವಶೇಷಗಳಡಿ ಸಿಲುಕಿದ್ದ ಒಂದು ವರ್ಷದ ಮಗು ಆಕೆಯ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು ಮಗುವಿನ ತಂದೆ ನಾಪತ್ತೆಯಾಗಿದ್ದು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ರಕ್ಷಣಾ ತಂಡ ಶೋಧ ಕಾರ್ಯ ನಡೆಸುತ್ತಿದೆ ಎಂದು ಹೇಳಿದ್ದಾರೆ.
2012 ರಲ್ಲಿ ಅಕ್ರಮವಾಗಿ ನಿರ್ಮಿಸಲಾದ ಈ ಕಟ್ಟಡದಲ್ಲಿ 50 ಮನೆಗಳಿದ್ದು ಈ ಕಟ್ಟಡದ ಹಿಂಭಾಗ ಕುಸಿದಿದ್ದು ಇಲ್ಲಿ ಹನ್ನೆರಡು ಕುಟುಂಬಗಳು ವಾಸವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದು 30 ಗಂಟೆಗಳು ಕಳೆದರೂ ಇನ್ನೂ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಮತ್ತು ಅಗ್ನಿಶಾಮಕ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.