ಉಕ್ಕಿನಡ್ಕದಲ್ಲಿ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಶಿವಗಿರಿ ದೇವಣ್ಣ ನಾಯ್ಕರ ಪುತ್ರ ರಿಕ್ಷಾ ಚಾಲಕ ಪ್ರವೀಣ್ (39) ಮೃತ ಪಟ್ಟ ಘಟನೆ ನಡೆದಿದೆ.
ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಬಣ್ಣುತ್ತಡ್ಕ ಭಾಗಕ್ಕೆ ಬಾಡಿಗೆ ಹೋಗಿ ಮರಳಿ ಬರುತ್ತಿದ್ದ ವೇಳೆ, ಉಕ್ಕಿನಡ್ಕ ಮೆಡಿಕಲ್ ಕಾಲೇಜು ಬಳಿ ಆಟೋ ರಿಕ್ಷಾದ ಎದುರು ನಾಯಿಯೊಂದು ಅಡ್ಡ ಬಂದಿತ್ತು. ತಪ್ಪಿಸಲೆತ್ನಿಸಿದಾಗ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯ ತಂದೆ ದೇವಣ್ಣ ನಾಯ್ಕ, ತಾಯಿ ಶಾರದ, ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.