ಅಪಘಾತ

ಗುಂಡ್ಯ: ಖಾಸಗಿ ಬಸ್ ಪಲ್ಟಿ-16ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ಬರ್ಚಿನಹಳ್ಳ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜೂ.7ರಂದು ಮುಂಜಾನೆ ಸಂಭವಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: ಗುಂಡ್ಯದ ಬರ್ಚಿನಹಳ್ಳ ತಿರುವಿನಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ಬೆಳ್ಳಂಬೆಳಗ್ಗೆ ನಡೆದಿದೆ.

akshaya college

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಇದಾಗಿದ್ದು, ಬಸ್ಸಿನಲ್ಲಿದ್ದ 16ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಗಾಯಾಳುಗಳನ್ನು ಫಹದ್ (20) ಮೂಡಬಿದ್ರೆ, ರಂಝೀನ್(25) ಪರಂಗಿಪೇಟೆ, ಉಮ್ಮರ್ (53)ದೇರಳಕಟ್ಟೆ, ತಮೀನ್(19) ಪುತ್ತೂರು, ಇಷಾಮ್(19) ಸಾಲ್ಮರ ಪುತ್ತೂರು, ರುಕ್ಮಯ(24) ಉಪ್ಪಿನಂಗಡಿ, ಜಾಹಿರ್ (23) ಸಾಲೆತ್ತೂರು ಬಂಟ್ವಾಳ, ಶಮೀರ್ (28) ವಿಟ್ಲ, ಆನ್ಸರ್ (26) ವಿಟ್ಲ, ಸೋಮಶೇಖರ (55) ದಾಸರಪುರ ಬೆಂಗಳೂರು, ಶರತ್(35) ದಾಸರಪುರ ಬೆಂಗಳೂರು, ಡಾ. ಮಹಂತ್ ಗೌಡ (47) ನೆಲಮಂಗಲ ಬೆಂಗಳೂರು, ಸಿಮಾಕ್ (23), ಅಬ್ದುಲ್ ರಜೀದ್ (38) ಸಂಪ್ಯ ಪುತ್ತೂರು, ಪೌಝಿಲ್ (23), ಕೈಕಂಬ ಮೂಡುಬಿದ್ರೆ, ಅಲ್ತಾಫ್(28) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ತಕ್ಷಣ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ 12 ಮಂದಿಯನ್ನು ಮಂಗಳೂರು ಐಲ್ಯಾಂಡ್ ಆಸ್ಪತ್ರೆಗೆ, ಓರ್ವನನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ಹಾಗೂ ಓರ್ವನನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸುಮಾರು 8 ಆಂಬುಲೆನ್ಸ್ಗಳಲ್ಲಿ ಗಾಯಾಳುಗಳನ್ನು ಸ್ಥಳಾಂತರಿಸಲಾಯಿತು. ಇವರಲ್ಲಿ ಮೂವರು ತೀವ್ರ ಗಾಯ ಹೊಂದಿದ್ದಾರೆ ಎಂದು ಹೇಳಲಾಗಿದೆ.

ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts