pashupathi
ಅಪಘಾತ

ಉರುಳಾದ ಜೋಲಿ: ಮಗು ಸಾವು!

tv clinic
ಜೋಳಿಗೆ ಕಟ್ಟಿದ್ದ ಸೀರೆ ಮಗುವಿನ ಕುತ್ತಿಗೆಗೆ ಸುತ್ತಿಕೊಂಡು ಉಸಿರುಕಟ್ಟಿ ಮಗು ಮೃತಪಟ್ಟ ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಉಡುಪಿ: ನಗರದ ಸಮೀಪ ಬಾಡಿಗೆ ಮನೆಯೊಂದರಲ್ಲಿ ಜೋಳಿಗೆ ಕಟ್ಟಿದ್ದ ಸೀರೆ ಮಗುವಿನ ಕುತ್ತಿಗೆಗೆ ಸುತ್ತಿಕೊಂಡು ಉಸಿರುಕಟ್ಟಿ ಮಗು ಮೃತಪಟ್ಟ ಘಟನೆ ನಡೆದಿದೆ.

akshaya college

ಮೃತಪಟ್ಟ ಮಗು ಕಾಳಮ್ಮ ಎಂದು ತಿಳಿಯಲಾಗಿದೆ.

ಅಯ್ಯಪ್ಪ ಇವರು ಉಡುಪಿಯಲ್ಲಿ ಕಳೆದ 3 ವರ್ಷಗಳಿಂದ ಕೆಲಸವನ್ನು ಮಾಡಿಕೊಂಡಿದ್ದು, ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಗಂಗಾಧರ ರವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದರು.

ಜೂನ್ 04ರಂದು ಬೆಳಿಗ್ಗೆ 8 ಗಂಟೆಗೆ ಮಗು ಕಾಳಮ್ಮ(1) ಅವರನ್ನು ಜೋಲಿಯಲ್ಲಿ ಹಾಕಿ ಮಲಗಿಸಿ ತಾಯಿ ಕೆಲಸಕ್ಕೆಂದು ಹೋಗಿದ್ದು, ವಾಪಸ್ಸು ಮನೆಗೆ 11:30 ಗಂಟೆಗೆ ಬಂದಾಗ ಮಗುವಿನ ಕುತ್ತಿಗೆಗೆ ಜೋಲಿಗೆ ಕಟ್ಟಿದ್ದ ಸೀರೆಯು ಸುತ್ತಿಕೊಂಡು ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿತ್ತು.

ತಕ್ಷಣ ಮಗುವನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯಾಧಿಕಾರಿಗಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗು ಜೋಲಿಯಿಂದ ಇಳಿಯಲು ಹೋಗಿ ಅಥವಾ ನಿದ್ರಾ ಸ್ಥಿತಿಯಲ್ಲಿ ಜೋಲಿಗೆಯಿಂದ ಬಿದ್ದು, ಜೋಲಿಗೆ ಕಟ್ಟಿದ ಸೀರೆಯು ಕುತ್ತಿಗೆಗೆ ತಾಗಿ ಉಸಿರುಕಟ್ಟಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 53/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts