ಬಂಟ್ವಾಳ: ಲಾರಿ ಪಲ್ಟಿಯಾಗಿ ಕಾರ್ಮಿಕನೊರ್ವ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಜಾರ್ಖಾಂಡ್ ಮೂಲದ ನಿರ್ಮಲಾ ಅನ್ಸ್ತಾ (32) ಮೃತಪಟ್ಟ ಕಾರ್ಮಿಕ.
ಲಾರಿ ಚಾಲಕ ಸುಜಿತ್, ಕ್ಲೀನರ್ ಸಿಮೋಹನ್ ಮುರ್ಮ ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಅಕ್ಕಿ ಲೋಡ್ ನ ಲಾರಿ ಬಂಟ್ವಾಳದ ಎಸ್‌ವಿ.ಎಸ್.ಕಾಲೇಜು ಬಳಿ ಬರುವಾಗ ಅತಿಯಾದ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಉಡುಪಿಯಿಂದ ಅಕ್ಕಿ ಲೋಡ್ ಮಾಡಿಕೊಂಡು ಮೂಡಬಿದಿರೆಯಾಗಿ ಬಂಟ್ವಾಳಕ್ಕೆ ಬರುವ ವೇಳೆ ಈ ಘಟನೆ ನಡೆದಿದೆ.
ಲಾರಿಯ ಹಿಂಭಾಗದಲ್ಲಿ ಅಕ್ಕಿ ಲೋಡ್ ಮೇಲೆ ಕುಳಿತುಕೊಂಡಿದ್ದ ಕಾರ್ಮಿಕ ಲಾರಿ ಪಲ್ಟಿಯಾದ ವೇಳೆ ರಸ್ತೆಗೆ ಎಸೆಯಲ್ಟಟ್ಟು ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ. ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರ್ಶ ಎಂಬ ಇನ್ನೋರ್ವ ಲಾರಿಯ ಹಿಂಬದಿ ಅಕ್ಕಿ ಲೋಡ್ ಮೇಲೆ ಕುಳಿತುಕೊಂಡಿದ್ದು ಒಟ್ಟಿಗೆ ಇಬ್ಬರು ಲಾರಿಯ ಹಿಂಬದಿಯಲ್ಲಿ ಕುಳಿತುಕೊಂಡಿದ್ದರು. ಆದರ್ಶನಿಗೂ ಗಂಭೀರವಾಗಿ ಗಾಯವಾಗಿದ್ದು, ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.