ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯೊಬ್ಬರ ಹೆಣ ಸೂಟ್ ಕೇಸ್ ನಲ್ಲಿ ಪತ್ತೆಯಾದ ಘಟನೆ ಹರ್ಯಾಣದ ರೋಕ್ಟಕ್ ನಲ್ಲಿ ನಡೆದಿದೆ.
22 ವರ್ಷದ ಹಿಮಾನಿ ನರ್ವಾಲ್ ಅವರ ಹೆಣವನ್ನಿರಿಸಿ ಸೂಟ್ ಕೇಸ್ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಉನ್ನತ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ.
ಹಿಮಾನಿ ನರ್ವಾಲ್ ಅವರು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಹರ್ಯಾಣ ರಾಜ್ಯಾದ್ಯಂತ 33 ಸಂಸ್ಥೆಗಳಿಗೆ ನಡೆದ ಪುರಸಭೆ ಚುನಾವಣೆಯ ಮುನ್ನಾದಿನ ಈ ಘಟನೆ ನಡೆದಿದ್ದು, ಮಾರ್ಚ್ 12 ರಂದು ಫಲಿತಾಂಶ ಹೊರಬೀಳಲಿದೆ.
ಸಂಪ್ಲಾ ಬಸ್ ನಿಲ್ದಾಣದ ಬಳಿ ನಾಗರಿಕರು ಸೂಟ್‌ಕೇಸ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ತಲುಪಿದಾಗ ಸೂಟ್‌ಕೇಸ್‌ನೊಳಗೆ ಹಿಮಾನಿ ನರ್ವಾಲ್ ಅವರ ಮೃತದೇಹ ಪತ್ತೆಯಾಗಿದೆ.
ಹಿಮಾನಿ ಅವರ ಕುತ್ತಿಗೆಯನ್ನು ದುಪಟ್ಟಾದಿಂದ ಬಿಗಿಯಲಾಗಿತ್ತು. ಅವರ ಕೈಗೆ ಮೆಹಂದಿ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ರೋಕ್ಟಕ್ ನ ವಿಜಯ ನಗರ ನಿವಾಸಿಯಾದ ಹಿಮಾನಿ ಅವರನ್ನು ದುಪಟ್ಟಾದಿಂದ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ತಿಳಿಸಿದ್ದಾರೆ