ರೋಡ್ ರೋಲರ್ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಲಪ್ಪುರ ತಿರುರಂಗಾಡಿ ಮುಂಬರದ ಕುಂಞಾಲಿ ಹಾಜಿ ಅವರ ಪುತ್ರ ಮೆಹಬೂಬ್ (32) ಸಾವಿಗೀಡಾಗಿದ್ದಾರೆ.
ಸಹಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶುಕ್ರವಾರ (ಫೆ.28) ಬೆಳಗ್ಗೆ ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಂಗೈಯಲ್ಲಿ ಅಪಘಾತ ಸಂಭವಿಸಿದ್ದು, ಕಾರು ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾರು ಮಂಗಳೂರಿನಿಂದ ಬರುತ್ತಿದ್ದು, ಅಪಘಾತದ ತೀವ್ರತೆಗೆ ಕಾರು 50 ಮೀಟರ್‌ನಷ್ಟು ಹಿಂದಕ್ಕೆ ಚಲಿಸಿದೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಜನರಲ್ ಆಸ್ಪತ್ರೆಗೆ ದಾಖಲು ಮಾಡಿದರೂ, ದಾರಿ ಮಧ್ಯೆ ಮೆಹಬೂಬ್ ಅವರು ಸಾವಿಗೀಡಾದರು.
ಕಾಸರಗೋಡು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.