ಪುತ್ತೂರು : ಕಾರು ಮತ್ತು ಆ್ಯಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಆಕ್ಟಿವಾ ಸವಾರ ಮೃತಪಟ್ಟ ಘಟನೆ ಕಬಕದಲ್ಲಿ ನಡೆದಿದೆ.
ಇಡ್ಕಿದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕುಂಡಡ್ಕ ಕಂಪ ನಿವಾಸಿ ಜನಾರ್ದನ (40 ವರ್ಷ) ಮೃತಪಟ್ಟವರು.
ಕಬಕದಿಂದ ವಿದ್ಯಾಪುರಕ್ಕೆ ತೆರಳುತ್ತಿದ್ದ ಆಕ್ಟಿವಾ ಹಾಗೂ ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.