Gl jewellers
ಅಪರಾಧ

ಲೋಕಾಯುಕ್ತ  ಹೆಸರಲ್ಲಿ ಅಧಿಕಾರಿಗಳಿಗೆ ಬ್ಯ್ಲಾಕ್ ಮೇಲ್, ರಿಸರ್ವ್ ಪೊಲೀಸ್ ಬಂಧನ!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಲೋಕಾಯುಕ್ತ ಡಿವೈಎಸ್‌ಪಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Papemajalu garady
Karnapady garady

ಬಂಧಿತ ಆರೋಪಿಯನ್ನು ರಿಸರ್ವ್ ಪೊಲೀಸ್ ಕಾನ್ಸ್ ಟೇಬಲ್‌ ಮುರುಗಪ್ಪ ಎಂದು ಗುರುತಿಸಲಾಗಿದೆ.

ಆರೋಪಿ ಮುರುಗಪ್ಪ ಲೋಕಾಯುಕ್ತ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದನು. ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜು ಆರ್. ಮಗದಮ್ ನೀಡಿದ ದೂರಿನ ಆಧಾರದ ಮೇಲೆ ವಿಧಾನಸೌಧ ಠಾಣೆಯಲ್ಲಿ ಎಫ್ ಐಆ‌ರ್ ದಾಖಲಾಗಿತ್ತು.

ಆರೋಪಿ ಮುರುಗಪ್ಪ ಅಪರಿಚಿತ ನಂಬರ್‌ನಿಂದ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ, ಲೋಕಾಯುಕ್ತ ಡಿವೈಎಸ್‌ಪಿ ಅಂತ ಪರಿಚಯ ಮಾಡಿಕೊಳ್ಳುತ್ತಿದ್ದನು. ನಿಮ್ಮವಿರುದ್ಧ ಅಕ್ರಮ ಆಸ್ತಿಗಳಿಕೆ ಕೇಸ್ ಹಾಕಲಾಗುತ್ತಿದೆ ಅಂತ ಬೆದರಿಕೆ ಹಾಕುತ್ತಿದ್ದನು. ನಿಮ್ಮ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದರೇ ಹಣ ನೀಡಿ ಅಂತ ಡಿಮ್ಯಾಂಡ್ ಮಾಡುತ್ತಿದ್ದನು. ಇದೇ ರೀತಿ ಮುರುಗಪ್ಪ ಹಲವು ಸರ್ಕಾರಿ ಅಧಿಕಾರಿಗಳ ಬೆದರಿಸಿ ಹಣ ವಸೂಲಿ ಮಾಡಿದ್ದನು. ಇನ್ನು, ಬ್ಲಾಕ್‌ಮೇಲ್ ಆರೋಪದ ಮೇಲೆ ಮುರುಗಪ್ಪ ಹಲವು ಬಾರಿ ಜೈಲು ಸೇರಿದ್ದನು. ಬಿಡುಗಡೆಯಾದ ಬಳಿಕ ಮತ್ತೆ ಲೋಕಾಯುಕ್ತ ಹೆಸರಿನಲ್ಲಿ ಬ್ಲಾಕ್‌ಮೇಲ್ ಮಾಡುತ್ತಿದ್ದನು. ಮುರುಗೆಪ್ಪ ವಿರುದ್ಧ ರಾಜ್ಯದ ವಿವಿಧ ಠಾಣೆಯಲ್ಲಿ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ತಾಯಿ‌ ಶವದ ಮುಂದೆ ದುಡ್ಡಿಗಾಗಿ ಕಿತ್ತಾಡಿಕೊಂಡ ಮಕ್ಕಳು! ರಾತ್ರಿ ಪೂರ್ತಿ ಠಾಣೆ ಮುಂಭಾಗವೇ ಶವವಿಟ್ಟ ಅಮಾನವೀಯ ಘಟನೆ!!

ಹಣಕ್ಕಾಗಿ ತಾಯಿಯ ಶವ ಹೂಳಲು ಅವಕಾಶ ನೀಡದಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ದೊಡ್ಡಕುರುಗೂಡು…