ಗಜಪಡೆಗೆ ಪ್ರಯಾಣಿಕರ ರೈಲು ಡಿಕ್ಕಿ ಹೊಡೆದ ಪರಿಣಾಮ ಆರು ಆನೆಗಳು ಸ್ಥಳದಲ್ಲೇ ಜೀವ ಬಿಟ್ಟಿರುವ ಘಟನೆ ನಡೆದಿದೆ.
ಶ್ರೀಲಂಕಾದ ಕೊಲಂಬೊ ನಗರದ ಪೂರ್ವಕ್ಕಿರುವ ಹಬರಾನಾ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ ವನ್ಯಜೀವಿ ಅಭಯಾರಣ್ಯದ ಬಳಿ ರೈಲು ಹೋಗ್ತಿದ್ದ ವೇಳೆ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನಾಲ್ಕು ಮರಿ ಆನೆಗಳು ಮತ್ತು ಎರಡು ವಯಸ್ಕ ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಅಪಘಾತದ ರಭಸಕ್ಕೆ ರೈಲು ಹಳಿ ತಪ್ಪಿದ್ದು, ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೇ ರೀತಿ 2024ರಲ್ಲಿ 9 ಆನೆಗಳು ಟ್ರೈನಿಗೆ ಬಲಿಯಾಗಿದ್ದವು. 2023ರಿಂದ ಇಲ್ಲಿಯವರೆಗೆ ಒಟ್ಟು 24 ಆನೆಗಳು ಟ್ರೈನ್ ಸಾವನ್ನಪ್ಪಿವೆ. ದುರ್ಘನಾ ಸ್ಥಳವು ಶ್ರೀಲಂಕಾ ರಾಜಾಧಾನಿ ಕೋಲೊಂಬೋಗೆ 124 ಮೈಲು ದೂರ ಇದೆ. ಪ್ರಕರಣ ಸಂಬಂಧ ವನ್ಯಜೀವಿಗಳ ವಿಭಾಗ ತನಿಕೆ ಆರಂಭಿಸಿದೆ. ಮಿನ್ನೇರಿಯಾ ನ್ಯಾಷನಲ್ ಪಾರ್ಕ್ ತುಂಬಾನೇ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಆನೆಗಳನ್ನು ನೋಡಲು ಸಫಾರಿಗೆ ಬರುತ್ತಾರೆ.