ಕೇರಳ: ಪ್ರಭಾಷಣ ಲೋಕದ ಅದ್ಭುತ ಭಾಷಣಗಾರ ಹಲವಾರು ಜನ ಮನಸ್ಸನ್ನು ಗೆದ್ದ ಹಾಫಿಳ್ ಮಸ್‌ಊದು ಸಖಾಫಿ ಗೂಡಲ್ಲೂರು ಇನ್ನಿಲ್ಲ
ಅದ್ಭುತವಾದ ಮನಮುಟ್ಟುವ ಮಾತುಗಳಿಂದ ಖ್ಯಾತರಾಗಿದ್ದ ಇಸ್ಲಾಮಿಕ್ ಪ್ರಭಾಷಣಗಾರ ಹಾಫಿಳ್ ಮಸ್ ಊದ್ ಸಖಾಫಿ ಗೂಡಲ್ಲೂರು ಹಟಾತ್ ಆಗಿ ಇಂದು ಮುಂಜಾನೆ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ.
ದೇಶ ವಿದೇಶಗಳಲ್ಲಿ ಹಲವಾರು ಪ್ರಭಾಷಣ ವೇದಿಕೆಯಲ್ಲಿ ಸಾನಿದ್ಯ ವಹಿಸಿದ್ದ ಗೂಡಲ್ಲೂರ್ ಸಖಾಫಿ ತನ್ನ ಮೃದುವಾದ ಭಾಷಣದಿಂದ ಪ್ರಖ್ಯಾತರಾಗಿದ್ದರು.
ಈಗಾಗಲೇ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಇಂದು ನಾಳೆ ಹಲವಾರು ವೇದಿಕೆಗಳಲ್ಲಿ ಉಸ್ತಾದರು ನೇತ್ರತ್ವ ನೀಡಬೇಕಾಗಿದ್ದು ಉಸ್ತಾದರ ಹಠತ್ ನಿಧನ ಇದೀಗ ಅವರ ಅಭಿಮಾನಿ ಬಳಗ ಮತ್ತು ಸಂಘಟನಾ ಕಾರ್ಯಕರಿಗೆ ದು:ಖದ ವಿಷಯವಾಗಿದೆ