ಉಡುಪಿ: ಮನೆಯ ಕೊಠಡಿಯಲ್ಲಿ ಮಾಡಿನ ಪಕ್ಕಾಸಿಗೆ ಯುವಕನೊರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಲಕೆರೆ ವಿದ್ಯೋದಯ ಶಾಲೆಯ ಸನಿಹ ಬುಧವಾರ ನಡೆದಿದೆ. ಆತ್ಮಹತ್ಯೆಗೈದಿರುವ ಯುವಕ ಬೈಲಕೆರೆಯ ರಾಮಕೃಷ್ಣ ದೇವಾಡಿಗರ ಪುತ್ರ, ವಾದ್ಯ ಕಲಾವಿದೆ ಅಶ್ವಥ್ (32) ಎಂದು ತಿಳಿದುಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಘಟನೆ ನಡೆದಿರುವ ಕೆಲವು ಕ್ಷಣದಲ್ಲಿಯೇ ನೇಣುಕುಣಿಕೆಯಿಂದ ಇಳಿಸಿದ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು. ಸುನಿಲ್ ಬೈಲಕೆರೆಯವರ ಸಹಾಯದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಅದಾಗಲೇ ಮೃತ ಪಟ್ಟಿರುವುದನ್ನು ದೃಢೀಕರಿಸಿದರು. ನಗರ ಪೋಲಿಸ್ ಠಾಣೆಯ ಎ ಎಸ್ ಐ ಸುಭಾಸ್ ಕಾಮತ್, ಹೆಡ್ ಕಾನ್ಸಟೇಬಲ್ ಹರೀಶ್ ಮಾಳ, ಜಯಕರ್ ಕಾನೂನು ಪ್ರ ಕ್ರಿಯೆ ನಡೆಸಿದರು.