ಕುಂಬಳೆ ಸಮೀಪದ ಸಿರಿಯಾದಲ್ಲಿ ರೈಲು ಹಳಿಯ ಬದಿ ಮನುಷ್ಯ ಮೂಳೆ ಮತ್ತು ತಲೆಬುರುಡೆ ಪತ್ತೆಯಾಗಿ ನಿಗೂಢತೆ ಸೃಷ್ಟಿಯಾಗಿದೆ.
ಇಂದು (ಬುಧವಾರ) ಮಧ್ಯಾಹ್ನ ಸುಮಾರಿಗೆ ತಲೆ ಬುರುಡೆ ಪತ್ತೆಯಾಗಿದ್ದು, ಊರ ಜನರು ತಿಳಿಸಿದ ಮಾಹಿತಿಯಂತೆ ಕುಂಬಳೆ ಪೋಲೀಸರು ಹಾಗೂ ಫೋರೆನ್ಸಿಕ್ ತಜ್ಞರು ಸ್ಥಳ ಸಂದರ್ಶಿಸಿದ್ದಾರೆ
ಪ್ರಾಥಮಿಕ ನೋಟದಲ್ಲಿ ತಲೆ ಬುರುಡೆ ಆರು ತಿಂಗಳ ಹಿಂದಿನದೆಂಬಂತೆ ಕಂಡುಬಂದಿದೆ ಎಂದು ಪೋಲೀಸರು ತಿಳಿಸಿದ್ದಾರೆ. ರೈಲು ಡಿಕ್ಕಿಯಾಗಿ, ಅಥವಾ ರೈಲಿನಿಂದ ಬಿದ್ದು ಮೃತಪಟ್ಟವರದ್ದಾಗಿರಬಹುದೇ ಎಂಬ ಶಂಕೆ ಮೂಡಿದೆ. ಮೂಳೆ ಮತ್ತು ಬುರುಡೆಯನ್ನು ಫೋರೆನ್ಸಿಕ್ ವಿಭಾಗದವರು ವಶಕ್ಕೆ ತೆಗೆದು ಉನ್ನತ ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.
ಶಿರಿಯ ಪರಿಸರದಿಂದ ಇತ್ತೀಚೆಗೆ ಯಾರೂ ಕಾಣೆಯಾದುದಿಲ್ಲ. ಈ ಹಿನ್ನೆಲೆಯಲ್ಲಿ ಈ ತಲೆಬುರುಡೆ ಯಾರದ್ದಿರಬಹುದೆಂಬ ಊಹಾಪೋಹಗಳು ಹುಟ್ಟಿದೆ.