Gl jewellers
ಅಪರಾಧ

ಕಿವಿ ಚುಚ್ಚಲು ಅರಿವಳಿಕೆ: ವೈದ್ಯರ ಎಡವಟ್ಟಿನಿಂದ 6 ತಿಂಗಳ ಮಗು ಸಾವು!!

Karpady sri subhramanya
ಕಿವಿ ಚುಚ್ಚಿಸುವ ಶಾಸ್ತ್ರದ ಸಲುವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ 6 ತಿಂಗಳ ಮಗು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ಚಾಮರಾಜನಗರ: ಕಿವಿ ಚುಚ್ಚಿಸುವ ಶಾಸ್ತ್ರದ ಸಲುವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ 6 ತಿಂಗಳ ಮಗು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಮಗುವಿಗೆ ಕಿವಿ ಚುಚ್ಚಿಸಲೆಂದು ಶೆಟ್ಟಹಳ್ಳಿ ಗ್ರಾಮದ ಹತ್ತಿರದಲ್ಲೇ ಇರುವ ಬೊಮ್ಮಲಾಪುರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದರೆ ಅಲ್ಲಿನ ವೈದ್ಯರು ಮಗುವಿನ ಎರಡೂ ಕಿವಿಗೆ ಲೋಕಲ್ ಅನಸ್ತೇಷಿಯಾ ಕೊಟ್ಟಿದ್ದಾರೆ.

Sampya jathre

ಅನಸ್ತೇಷಿಯಾ ನೀಡಿದ ಬಳಿಕ ಮಗುವಿಗೆ ಫಿಟ್ಸ್ ಬಂದು ಮೂರ್ಚೆ ಹೋಗಿದೆ. ತಕ್ಷಣ ಮಗುವನ್ನು ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಓವರ್‌ ಡೋಸ್ ನೀಡಿದರೆಂಬ ಆರೋಪವು ಕೇಳಿ ಬಂದಿದ್ದು ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ಮಗು ಅಸುನೀಗಿದೆ.. ಮಗು ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ತಾಲೂಕು ವೈದ್ಯಾಧಿಕಾರಿ ಡಾ. ಅಲೀಂಪಾಶಾ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಅನಸ್ತೇಷಿಯಾ ಕೊಟ್ಟ ಮೇಲೆ ಪಿಟ್ಸ್ ಬಂದಿದೆ,ತಕ್ಷಣ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ, ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಮಗು ಅಸುನೀಗಿದೆ.

ಮೆಡಿಕಲ್ ಲೀಗಲ್ ಕೇಸ್ ಮಾಡಿ ಮಗುವಿನ ಸಾವಿಗೆ ನಿಖರ ಕಾರಣ ಏನೆಂಬುದನ್ನು ತನಿಖೆ ಮಾಡಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವಯದಾಗಿ ತಿಳಿಸಿದ್ದಾರೆ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮಗುವಿಗೆ ಚುಚ್ಚಲು 200 ರೂಪಾಯಿ ಹಣವನ್ನು ಸಹ ಪಡೆದಿದ್ದರೂ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ನಿಜಕ್ಕೂ ವೈದ್ಯರ ಎಡವಟ್ಟಿನಿಂದ ಮಗು ಅಸುನೀಗಿತಾ ಇಲ್ಲವಾ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯಿಂದಷ್ಟೇ ಗೊತ್ತಾಗಬೇಕಿದೆ ಒಟ್ಟಾರೆ ಪ್ರಖ್ಯಾತನ ತುಂಟಾಟಗಳಿಂದ ಸಂಭ್ರಮ ತುಂಬಿದ್ದ ಮನೆಯುಲ್ಲೀಗ ಸೂತಕದ ಛಾಯೆ ಆವರಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts