ಅಪರಾಧ

ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ಡಿಎಲ್ ರದ್ದು!!

ಫುಟ್‌ಪಾತ್‌ ಮೇಲೆ ಬೈಕ್, ಕಾರು ಓಡಿಸುವ ಸವಾರರಿಗೆ ಸಂಚಾರ ವಿಭಾಗದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪಾದಾಚಾರಿ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಡಿಎಲ್ ಅಮಾನತು ಮಾಡುವುದಾಗಿ ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರಿಗೆ ಬಿಸಿ ಮುಟ್ಟಿಸಲು ಟ್ರಾಫಿಕ್ ಪೊಲೀಸರು ( traffic police) ಮುಂದಾಗಿದ್ದಾರೆ. ಇನ್ಮುಂದೆ ಫುಟ್‌ಪಾತ್‌ನಲ್ಲಿ ರೈಡಿಂಗ್ ಮಾಡಿದರೆ ಡ್ರೈವಿಂಗ್‌ ಲೈಸೆನ್ಸ್‌ (Driving licence) ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

akshaya college

ಫುಟ್‌ಪಾತ್‌ ಮೇಲೆ ಬೈಕ್, ಕಾರು ಓಡಿಸುವ ಸವಾರರಿಗೆ ಸಂಚಾರ ವಿಭಾಗದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪಾದಾಚಾರಿ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಡಿಎಲ್ ಅಮಾನತು ಮಾಡುವುದಾಗಿ ಎಚ್ಚರಿಸಿದ್ದಾರೆ.

ಇದರ ಜೊತೆಗೆ ಕೇಸ್ ದಾಖಲಿಸಿ ಸೂಕ್ತ ದಂಡ ವಿಧಿಸಲಿದ್ದಾರೆ. ಫುಟ್‌ಪಾತ್ ರೈಡಿಂಗ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರ ನಿರ್ಧಾರಿಸಿದ್ದಾರೆ. ಪಾದಚಾರಿಗಳ ಬಳಕೆಗೆ ಫುಟ್‌ಪಾತ್ ಇರೋದು. ಅಲ್ಲಿ ವಾಹನ ಚಲಾಯಿಸುವಂತಿಲ್ಲ ಎಂದು ಸೂಚಿಸಿದ್ದಾರೆ.

ಪಾದಚಾರಿಗಳು ಹೊರತುಪಡಿಸಿ ಬೇರೆ ಯಾರೇ ಬಳಸಿದರೂ ಕ್ರಮ ಆಗಲಿದೆ. ಪಾದಚಾರಿಗಳ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸರು ಕಠಿಣ ನಿಯಮ ರೂಪಿಸಿದ್ದಾರೆ.

ಇತ್ತೀಚೆಗೆ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ನಿಯಮ ಉಲ್ಲಂಘಿಸಿ ಫುಟ್‌ಪಾತ್ ( footpath) ಮೇಲೆ ವಾಹನ ಚಲಾಯಿಸಿಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಪಾದಚಾರಿಗಳಿಗೆ ಓಡಾಟಕ್ಕೆ ಕಿರಿಕಿರಿಯಾಗುತ್ತಿದೆ. ಫುಟ್‌ಪಾತ್‌ನಲ್ಲಿ ಬೈಕ್‌ ಅಷ್ಟೇ ಅಲ್ಲ, ಕೆಲವರು ಕಾರುಗಳನ್ನೂ ಚಲಾಯಿಸಿರುವುದು ಕಂಡುಬಂದಿದೆ. ಇದೆಲ್ಲವನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts