ಮಧ್ಯಪ್ರದೇಶದ ಟಿಕ್‌ಮಗಢದಲ್ಲಿ ಇಬ್ಬರು ಸಹೋದರರು ತಮ್ಮ ತಂದೆಯ ಅಂತ್ಯಕ್ರಿಯೆ ನಡೆಸುವ ವಿಚಾರ ಭಾರೀ ವಾಗ್ವಾದ ಪಡೆದುಕೊಂಡಿದ್ದು, ಕೊನೆಗೆ ದೇಹವನ್ನು ಇಬ್ಬಾಗಿಸುವ ಮೂಲಕ ಅಂತ್ಯಕ್ರಿಯೆ ನಡೆಸುವ ಅಮಾನವೀಯ ಘಟನೆ ನಡೆದಿದೆ.
ಧ್ಯಾನ್ ಸಿಂಗ್ ಘೋಷ್ (85) ಎಂಬುವವರು ಸಾವಿಗೀಡಾಗಿದ್ದರು. ಅವರ ಮಗನಾದ ದಾಮೋದರ್ ಸಿಂಗ್ ತನ್ನ ತಂದೆಯನ್ನು ನೋಡಿಕೊಳ್ಳುತ್ತಿದ್ದ. ಅಂತ್ಯಕ್ರಿಯೆಗೆಂದು ಸಿದ್ಧತೆ ಮಾಡುತ್ತಿದ್ದ ಸಂದರ್ಭದಲ್ಲಿ ಆತನ ಸಹೋದರ ಕಿಶನ್ ಸಿಂಗ್ ತನ್ನ ಕುಟುಂಬದೊಂದಿಗೆ ಬಂದಿದ್ದು, ನಾನೇ ಅಂತ್ಯಕ್ರಿಯೆ ಮಾಡುವುದಾಗಿ ಪಟ್ಟು ಹಿಡಿದಿದ್ದ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಕೊನೆಗೂ ರಾಜಿ ಮಾಡಲು ಒಪ್ಪದ ಇಬ್ಬರು ತಮ್ಮ ತಂದೆಯ ದೇಹವನ್ನು ಅರ್ಧಕ್ಕೆ ಕತ್ತರಿಸಿ ಇಬ್ಬರೂ ಪ್ರತ್ಯೇಕವಾಗಿ ಅಂತ್ಯಕ್ರಿಯೆ ಮಾಡೋಣ ಎಂದು ಅಮಾನವೀಯ ಪ್ರಸ್ತಾಪ ಇಟ್ಟಿದ್ದಾರೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಅವರು ಸ್ಥಳಕ್ಕೆ ಬಂದು ಮಧ್ಯಸ್ಥಿಕೆ ವಹಿಸಲು ಪ್ರಯತ್ನ ಪಟ್ಟಿದ್ದಾರೆ. ನಂತರ ಪೊಲೀಸರು ಕಿಶನ್ ಮತ್ತು ಆತನ ಕುಟುಂಬದ ಸಮ್ಮುಖದಲ್ಲಿ ದಾಮೋದರ್ ಅಂತ್ಯಕ್ರಿಯೆ ಮಾಡಲು ಅನುವು ಮಾಡಿಕೊಟ್ಟರು.
ಸಹೋದರರ ಈ ಕೃತ್ಯ ನಿಜಕ್ಕೂ ಅಲ್ಲಿನ ಜನರನ್ನು ಬೆಚ್ಚಿಬೀಳಿಸಿದೆ.