ಕಾಸರಗೋಡಿನ ಕೂಡ್ಲು ಪಾರೆಕಟ್ಟೆ ಶಾಸ್ತಾನಗರದ ಅಯ್ಯಪ್ಪ ಮಂದಿರದಲ್ಲಿ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಲಾಗಿದ್ದ 4ಪವನ್ ಚಿನ್ನದ ಸರ ಎಗರಿಸಿ ಬದಲಿಗೆ ಚಿನ್ನದ ಒಪ್ಪ ಹಾಕಿದ ಬೆಳ್ಳಿಯ ಸರ ತೊಡಿಸಿ ವಂಚಿಸಿದ ವ್ಯಕ್ತಿ ನಾಟಕೀಯವಾಗಿ ಫೋಲೀಶ್ ವಶವಾಗಿದ್ದಾನೆ.
ಅಯ್ಯಪ್ಪ ಮಂದಿರದ ಅಧ್ಯಕ್ಷ ಕೆ.ವೇಣುಗೋಪಾಲ್ ನೀಡಿದ ದೂರಿನಂತೆ ಮಾಜಿ ಕಾರ್ಯದರ್ಶಿ ಕೂಡ್ಲು ಹೊಸಮನೆ ರಸ್ತೆಯ ದಯಾನಂದ ಶೆಟ್ಟಿ ಎಂಬಾತನ ವಿರುದ್ಧ ಕೇಸು ದಾಖಲಿಸಿ ಆರೋಪಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಕೂಡ್ರು ಅಯ್ಯಪ್ಪ ಮಂದಿರದ ವಿಗ್ರಹಕ್ಕೆ ಊರ ಭಕ್ತಾದಿಗಳೆಲ್ಲ ಸೇರಿ 4ಪವನ್ ತೂಕದ ಚಿನ್ನದ ಸರಹಾಕಿದ್ದರು. ಈ ಸಂದರ್ಭದಲ್ಲಿ ದಯಾನಂದ ಶೆಟ್ಟಿ ಕಾರ್ಯದರ್ಶಿಯಾಗಿದ್ದು, ಮಂದಿರದ ಸೊತ್ತು ಸಂರಕ್ಷಣೆಯ ಹೊಣೆ ಅವರದ್ದಾಗಿತ್ತು. ಇತ್ತೀಚೆಗೆ ದೇವರ ಕೊರಳಿನ ಚಿನ್ನದ ಸರ ತುಂಡಾಗಿ ಬಿತ್ತು. ಅದನ್ನು ಶುಭ್ರಗೊಳಿಸಿ ರಿಪೇರಿಗೆಂದು ಕೊಂಡೊಯ್ದಾಗ ಅದು ಚಿನ್ನವಲ್ಲವೆಂದೂ, ಬೆಳ್ಳಿಲೇಪಿತ ಮಾಲೆಯೆಂದೂ ಬಯಲಾಯಿತು. ಇದು ಊರಲಿ ಭಾರೀ ಚರ್ಚೆಗೆ
ಗ್ರಾಸವಾಯಿತು.
ಈ ಕುರಿತು ಕಾರ್ಯದರ್ಶಿಯಾಗಿದ್ದ ದಯಾನಂದನ ಮೇಲೆ ಶಂಕೆ ಮೂಡಿದಾಗ ಆತ ಸತ್ಯಪ್ರಮಾಣಕ್ಕೆ ಮುಂದಾದನೆಂದೂ, ಬಳಿಕ ಮೊನ್ನೆ ಚಿನ್ನದ ಸರ ತನ್ನ ಕೈಯಿಂದ ಬಾವಿಗೆ ಬಿದ್ದಿದೆಯೆಂದೂ ಹೇಳಿದನು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳವನ್ನು ಕರೆಸಿ ಬಾವಿಯಿಂದ ನೀರು ಬತ್ತಿಸಿ ಹುಡುಕಿದರೂ ಚಿನ್ನಾಭರಣ ಪತ್ತೆಯಾಗಲಿಲ್ಲ. ಬಳಿಕ ಪೋಲೀಸರು ಬಂದು ವಿಚಾರಿಸಿದಾಗ ತಪ್ರೊಪ್ಪಿಕೊಂಡ ಆರೋಪಿ ಚಿನ್ನದ ಸರ ತಾನು ತೆಗೆದು ಮಾರಿಕೊಂಡಿರುವುದಾಗಿ ಪೋಲೀಸರಲ್ಲಿ ಒಪ್ಪಿದ್ದಾನೆ.
ಈ ಹಿನ್ನೆಲೆಯಲ್ಲಿ ದೂರಿನ ಮೇರೆಗೆ ಕೇಸು ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದರು.