Gl harusha
ಅಪರಾಧ

ನಕಲಿ ಆಧಾ‌ರ್ ಕಾರ್ಡು ಬಳಸಿ ಅಕ್ರಮವಾಗಿ ವಾಸಿಸುತ್ತಿದ್ದ 27 ಬಾಂಗ್ಲಾ ಪ್ರಜೆಗಳ ಬಂಧನ

ನಕಲಿ ಆಧಾ‌ರ್ ಕಾರ್ಡು ಬಳಸಿ ವಾಸಿಸುತ್ತಿದ 27ಮಂದಿ ಬಾಂಗ್ಲಾ ನಿವಾಸಿಗರನ್ನು ಕೊಚ್ಚಿಯ ಪರವೂ‌ರ್ ಎಂಬಲ್ಲಿ ಬಂಧಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ನಕಲಿ ಆಧಾ‌ರ್ ಕಾರ್ಡು ಬಳಸಿ ಕೇರಳದಲ್ಲಿ ವಾಸಿಸುತ್ತಿದ 27ಮಂದಿ ಬಾಂಗ್ಲಾ ನಿವಾಸಿಗರನ್ನು ಕೊಚ್ಚಿಯ ಪರವೂ‌ರ್ ಎಂಬಲ್ಲಿ ಬಂಧಿಸಲಾಗಿದೆ. ವಡಕ್ಕನ್ ಪರವೂರಿನ ಮನೆಯೊಂದರಲ್ಲಿ ಇವರು ಜತೆಯಾಗಿ ವಾಸಿಸುತ್ತಿದ್ದರು. ಶುಕ್ರವಾರ ಬೆಳಿಗ್ಗೆ ಬಂಧನ ನಡೆಯಿತು.

srk ladders
Pashupathi
Muliya

ಈ ಹಿಂದೆ ಎರ್ನಾಕುಳಂ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲೂ ಏಳು ಮಂದಿ ಬಾಂಗ್ಲಾ ನಿವಾಸಿಗಳನ್ನು ಸಮಾನ ರೀತಿಯಲ್ಲಿ ಬಂಧಿಸಲಾಗಿತ್ತು. ರಹಸ್ಯ ಮಾಹಿತಿಯ ಆಧಾರದಲ್ಲಿ 27ಮಂದಿಯನ್ನು ಬಂಧಿಹಲಾಗಿದ್ದು, ಇವರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಇಷ್ಟು ಮಂದಿ ಬಾಂಗ್ಲಾ ಪ್ರಜೆಗಳು ನಕಲಿ ಆಧಾರ್ ಬಳಸಿ ಒಟ್ಟಾಗಿ ವಾಸಿಸುತ್ತಿರುವುದು ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದು, ಬಂಧಿತರು ಕೇರಳಕ್ಕೆ ಹೇಗೆ ತಲುಪಿದರು ಮತ್ತು ಇವರಿಗೆ ಆದಾ‌ರ್ ಕಾರ್ಡು ಹೇಗೆ ದೊರೆಯಿತೆಂದು ತನಿಖೆ ನಡೆಯುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts