G L Acharya Jewellers
ಅಪರಾಧ

ಅಂತರಾಜ್ಯ ಮನೆಗಳ್ಳನ ಬಂಧನ;  ಲಕ್ಷಾಂತರ ಮೌಲ್ಯದ ಸೊತ್ತು ವಶ

Karpady sri subhramanya
ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ 2024 ಡಿ.20 ರಂದು ಮನೆಯವರು ಇಲ್ಲದೇ ಇರುವ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಕಾಲಿನಿಂದ ಒದ್ದು ಬಾಗಿಲು ಮುರಿದು ಮನೆಯ ಒಳಗಿದ್ದ ಗೋಡೇಜನ್ನು ಮೀಟಿ ಚಿನ್ನಾಭರಣವನ್ನು ಕಳವು 

ಈ ಸುದ್ದಿಯನ್ನು ಶೇರ್ ಮಾಡಿ

Karpady jathre

ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ 2024 ಡಿ.20 ರಂದು ಮನೆಯವರು ಇಲ್ಲದೇ ಇರುವ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಕಾಲಿನಿಂದ ಒದ್ದು ಬಾಗಿಲು ಮುರಿದು ಮನೆಯ ಒಳಗಿದ್ದ ಗೋಡೇಜನ್ನು ಮೀಟಿ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿದ್ದು, ಈ ರೀತಿಯ ಕಳ್ಳತನ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಕಡೆ ಆಗುತ್ತಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಜಂಟಿ ಕಾರ್ಯಾಚರಣೆ ನಡೆಸಿ ಹಗಲು ಮನೆ ಕಳ್ಳ ತನ ನಡೆಸಿ ಯಾವುದೇ ಸುಳಿವು ನೀಡದೇ ಪರಾರಿಯಾಗುತ್ತಿದ್ದ ಆರೋಪಿಯನ್ನು ಅಪರಾಧ ಪತ್ತೆ ತಂಡ ಜ.10 ರಂದು ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ಕಾರು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

SRK Ladders

ಕಾಸರಗೋಡು ಜಿಲ್ಲೆಯ ಉಪ್ಪಳ ಗುಡ್ಡೆಮನೆ ನಿವಾಸಿ, ಪ್ರಸ್ತುತ ಕಾಸರಗೋಡು ಮಂಜೇಶ್ವರ ಹೊಸಂಗಡಿ, ಮೂಡಂಬೈಲು, ನವಿಲು ಗಿರಿ ನಿವಾಸಿ ಸೂರಜ್ ಕೆ. (36 ವ.) ಬಂಧಿತ ಆರೋಪಿ.

ಬಂಧಿತ ಆರೋಪಿಯನ್ನು ವಿಚಾರಿಸಿದಾಗ ಆತನು ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ, ಈ ಹಿಂದೆ ಕಡಬ ಠಾಣಾ ಸರಹದ್ದಿನ ಅಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ಸರಹದ್ದಿನ ಇರಾ ಹಾಗೂ ವಿಟ್ಲ ಪೊಲೀಸ್ ಠಾಣಾ ಸರಹದ್ದಿನ ಕೊಲ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ತಿದು ಗ್ರಾಮದ ಅಳಕೆಮಜಲು ಕಡೆಗಳಲ್ಲಿ ಹಗಲು ಸಮಯ ಕಳವು ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿರುತ್ತದೆ.

ಇದೊಂದು ವಿಶೇಷ ಪ್ರಕರಣ ಆಗಿದ್ದು, ಆರೋಪಿಯು ಕಳ್ಳತನ ಮಾಡಿ ಯಾವುದೇ ಸುಳಿವು ಸಿಗದೆ ಪರಾರಿಯಾಗುತ್ತಿದ್ದು, ಈ ಬಗ್ಗೆ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿರುತ್ತಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Kerala Astrologer

Related Posts

ಒಂದೇ ಮನೆಯಲ್ಲಿ ರಕ್ತಸಿಕ್ತ ಮೂರು ಮೃತದೇಹಗಳು ಪತ್ತೆ..! ಮಚ್ಚಿನಿಂದ ಕೊಚ್ಚಿ ಕೊಂದ ಪತಿ| ಪೊಲೀಸರಿಗೆ ಶರಣಾದ ಆರೋಪಿ!!

ಕುಟುಂಬ ಕಲಹ ಕಾರಣಕ್ಕೆ ಪತ್ನಿ ಪೊಲೀಸ್  ಠಾಣೆಗೆ ದೂರು ನೀಡಿದ್ದಳು ಎಂದು ಪತ್ನಿ ಸೇರಿದಂತೆ…