pashupathi
ಅಪರಾಧ

ಉತ್ಸವ ವೇಳೆ ಆನೆ ದಾಂಧಲೆ: ಕಾಲ್ತುಳಿತದಲ್ಲಿ 20 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

tv clinic
ಧಾರ್ಮಿಕ ಉತ್ಸವದ ವೇಳೆ ಆನೆಯೊಂದು ದಾಳಿ ಮಾಡಿದ ಪರಿಣಾಮ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಲಪ್ಪುರಂ: ಕೇರಳದ ಮಲಪ್ಪುರಂನಲ್ಲಿನ ದೇಗುಲವೊಂದರ ಧಾರ್ಮಿಕ ಉತ್ಸವದ ವೇಳೆ ಆನೆಯೊಂದು ದಾಳಿ ಮಾಡಿದ ಪರಿಣಾಮ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

akshaya college

ಕೇರಳದ ಮಲಪ್ಪುರಂನ ತಿರೂರಿನ ಬಿ.ಪಿ.ಅಂಗಡಿಯ ಜಾರಮ್ ಮೈದಾನದಲ್ಲಿ ಈ ಘಟನೆ ನಡೆದಿದ್ದು, ದೇಗುಲ ಉತ್ಸವಕ್ಕಾಗಿ ಸಿಂಗಾರಗೊಂಡು ನಿಂತಿದ್ದ ಆನೆಯೊಂದು ಏಕಾಏಕಿ ಆಕ್ರೋಶಗೊಂಡು ತನ್ನ ಮುಂದಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದೆ.

ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಏಕಾಏಕಿ ನೆಲಕ್ಕೆ ಅಪ್ಪಳಿಸಿದೆ. ಬಳಿಕ ಅಲ್ಲಿದ್ದ ಜನರತ್ತ ಆನೆ ನುಗ್ಗಿದ್ದು ಈ ವೇಳೆ ಕನಿಷ್ಟ 20 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬಿಪಿ ಅಂಗಡಿಯಲ್ಲಿರುವ ಯಾಹೂ ತಂಗಳ್ ದೇಗುಲದಲ್ಲಿ ನಾಲ್ಕು ದಿನಗಳ ವಾರ್ಷಿಕ ಉತ್ಸವಗಳು ಅಥವಾ ನೇರ್ಚಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವಿಶೇಷ ಕಾರ್ಯಕ್ರಮಕ್ಕಾಗಿ ತರಬೇತಿ ಪಡೆದ ಆನೆಗಳನ್ನು ಕರೆಸಲಾಗಿತ್ತು.

 ಯಾಹೂ ತಂಗಳ್ ದೇಗುಲದಲ್ಲಿ ನಾಲ್ಕು ದಿನಗಳ ವಾರ್ಷಿಕ ಉತ್ಸವಗಳು ಅಥವಾ ನೇರ್ಚಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವಿಶೇಷ ಕಾರ್ಯಕ್ರಮಕ್ಕಾಗಿ ತರಬೇತಿ ಪಡೆದ ಆನೆಗಳನ್ನು ಕರೆಸಲಾಗಿತ್ತು.

ಧಾರ್ಮಿಕ ಕಾರ್ಯಕ್ರಮದಲ್ಲಿ ಐದು ಆನೆಗಳು ಭಾಗಿಯಾಗಿದ್ದವು. ಆದರೆ ಕಾರ್ಯಕ್ರಮ ಮುಗಿಯುವ ಕೆಲವೇ ಗಂಟೆಗಳ ಮೊದಲು ಪಕ್ಕೋತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆಯು ದಿಢೀರ್ ಆಕ್ರೋಶಗೊಂಡು ದಾಳಿ ನಡೆಸಿದೆ.

ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೊಟ್ಟಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆನೆ ದಾಳಿಯಿಂದ ಗಾಬರಿಗೊಂಡ ಜನರು ಓಡಲು ಆರಂಭಿಸಿದ್ದಾರೆ. ಇದರಿಂದ ಕಾಲ್ತುಳಿತವಾಗಿ 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ತಿರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾವುತರು ಹರಸಾಹಸಪಟ್ಟು ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts