ಮೈಸೂರು: ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮೂವರು ಕೈದಿಗಳು ಮೃತಪಟ್ಟಿದ್ದಾರೆ. ಕೇಕ್ ತಯಾರಿಕೆಗೆ ಬಳಸುವ ಎಸ್ಸೆನ್ಸ್ ದ್ರವ ಕುಡಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳು ಮೃತಪಟ್ಟಿದ್ದಾರೆ. ಡಿಸೆಂಬರ್ 26 ರಂದು ಮೈಸೂರು ಕಾರಾಗೃಹದಲ್ಲಿ ಬೇಕರಿ ಪದಾರ್ಥಗಳನ್ನು ತಯಾರಿಸುವಾಗ ಕೈದಿಗಳಾದ ಮಾದೇಶ್, ನಾಗರಾಜ್ ಮತ್ತು ರಮೇಶ್ ಪದಾರ್ಥಗಳಿಗೆ ಬಳಸುವ ಎಸ್ಸೆನ್ಸಿಯಲ್ ದ್ರವವನ್ನು ಕುಡಿದಿದ್ದರು. ಪರಿಣಾಮ ಮೂವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ಫಲಕಾರಿ ಕಾಣದೆ ಮೃತ ಪಟ್ಟಿದ್ದಾರೆ.