ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ (RSS) 9 ಮಂದಿ ಕಾರ್ಯಕರ್ತರಿಗೆ ತಲಶ್ಶೇರಿ (kerala)ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಕೇರಳದ ಕಣ್ಣೂರು ಜಿಲ್ಲೆಯಲ್ಲಿ 19 ವರ್ಷಗಳ ಹಿಂದೆ ನಡೆದ ಅಪರಾಧ ಸಿಪಿಐ ಕಾರ್ಯಕರ್ತ ರಿಜಿತ್ ಶಂಕರನ್ ಹತ್ಯೆಗೆ ಸಂಬಂಧಿಸಿದಂತೆ ಒಂಬತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರಿಗೆ ತಲಕ್ಕೇರಿ ನ್ಯಾಯಾಲಯ ಮಂಗಳವಾರ (ಜ.7) ಜೀವಾವಧಿ ಶಿಕ್ಷೆ ವಿಧಿಸಿದೆ.
ಅಂದು ಏನಾಗಿತ್ತು?
ಕನ್ನಪುರಂ ಚುಂಡಾದ 25 ವರ್ಷದ ಸಿಪಿಐ(ಎಂ) ಸದಸ್ಯ ರಿಜಿತ್ ಅವರು ಅಕ್ಟೋಬರ್ 3, 2005 ರಂದು ಮನೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ಆರ್ ಎಸ್ ಎಸ್ ನ ಕಾರ್ಯಕರ್ತರು ಚುಂಡಾದ ದೇವಸ್ಥಾನದ ಬಳಿ ಹೊಂಚು ಹಾಕಿ ಶಸ್ತ್ರಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಷ್ಟೇ ಅಲ್ಲದೆ ರಿಜಿತ್ ಅವರ ಸ್ನೇಹಿತರ ಮೇಲೆ ಕೂಡ ಹಲ್ಲೆ ನಡೆಸಲಾಗಿತ್ತು, ಈ ವೇಳೆ ಸಿಪಿಐ ಕಾರ್ಯಕರ್ತ ರಿಜಿತ್ ಶಂಕರನ್ ಸಾವನ್ನಪ್ಪಿದ್ದರು.
ನಂತರ ಜನವರಿ 4ರಂದು ತಲಶ್ಶೇರಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ 9 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು.
ಒಟ್ಟು ಹತ್ತು ಜನ ಆರೋಪಿಗಳಲ್ಲಿ ಒಬ್ಬ ಆರೋಪಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೀಗ 9 ಆರೋಪಿಗಳಾದ ಸುಧಾಕರನ್ (57), ಜಯೇಶ್(41),ರಂಜಿತ್ (44), ಅಜಿಂದ್ರ. (51)ನಂತರ ಜನವರಿ 4ರಂದು ತಲಶ್ಶೇರಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ 9 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಒಟ್ಟು ಹತ್ತು ಜನ ಆರೋಪಿಗಳಲ್ಲಿ ಒಬ್ಬ ಆರೋಪಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೀಗ 9 ಆರೋಪಿಗಳಾದ ಸುಧಾಕರನ್ (57), ಜಯೇಶ್ (41), ರಂಜಿತ್ (44), ಅಜೀಂದ್ರನ್ (51), ಅನಿಲ್‌ಕುಮಾರ್ (52), ರಾಜೇಶ್ (46), ಶ್ರೀಕಾಂತ್ (47), ಅವರ ಸಹೋದರ ಶ್ರೀಜಿತ್ (43), ಮತ್ತು ಭಾಸ್ಕರನ್ ( 67)ಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.