Gl harusha
ಅಪರಾಧ

ರಾಜ್ಯದ ನಕ್ಸಲ್‌ ಗ್ಯಾಂಗ್ ಶರಣಾಗತಿಗೆ ಸಜ್ಜು.! ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

ರಾಜ್ಯ ಸರಕಾರದ ನಕ್ಸಲ್‌ ಶರಣಾಗತಿ ಪ್ಯಾಕೇಜ್ ಘೋಷಣೆ ಬಳಿಕ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ 6 ಮಂದಿ ನಕ್ಸಲರು ಜ. 8ರಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದೆ ಶರಣಾಗಲಿದ್ದಾರೆಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು: ರಾಜ್ಯ ಸರಕಾರದ ನಕ್ಸಲ್‌ ಶರಣಾಗತಿ ಪ್ಯಾಕೇಜ್ ಘೋಷಣೆ ಬಳಿಕ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ 6 ಮಂದಿ ನಕ್ಸಲರು ಜ. 8ರಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದೆ ಶರಣಾಗಲಿದ್ದಾರೆಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.

srk ladders
Pashupathi
Muliya

ಮುಂಡಗಾರು ಲತಾ, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರೆಪ್ಪ ಅರೋಲಿ, ಕೆ. ವಸಂತ, ಟಿ.ಎನ್. ಜೀಶ್ 2024ರ ನಕ್ಸಲ್ ಶರಣಾಗತಿ ಪ್ಯಾಕೇಜ್‌ನಡಿ ಸಮಾಜದ ಮುಖ್ಯವಾಹಿಗೆ ಬರುವುದು ಬಹುತೇಕ ಖಚಿತವಾಗಿದೆ. ಉಡುಪಿ ಜಿಲ್ಲೆ ಕಾರ್ಕಳ ಸಮೀಪದಲ್ಲಿ ನಕ್ಸಲ್ ಮುಖಂಡ ವಿಕ್ರಮ್ ಗೌಡ ಎನ್‌ಕೌಂಟರ್ ಬಳಿಕ ಭೂಗತರಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ನಕ್ಸಲ್ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ನಡೆಸಿದ್ದರು.

ಸರಕಾರ ಕೂಡ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ನಕ್ಸಲ್ ಶರಣಾಗತಿ ಪ್ಯಾಕೇಜ್-2024 ಘೋಷಣೆ ಮಾಡಿತ್ತು. ಇವರ ಶರಣಾಗತಿಯೊಂದಿಗೆ ಜಿಲ್ಲೆಯ ಮಲೆನಾಡು ನಕ್ಸಲ್‌ ಪೀಡಿತ ಪ್ರದೇಶವೆಂಬ ಹಣೆಪಟ್ಟಿಯಿಂದ ಹೊರಬರಲಿದೆ.

‘6 ಮಂದಿ ನಕ್ಸಲರ ಶರಣಾಗತಿ ಸಂಬಂಧ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಅವರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ನಡೆಯುತ್ತಿರುವುದು ನಿಜ ಎಂದು  ಡಾ| ವಿಕ್ರಮ್ ಅಮಟೆ, ಎಸ್‌ಪಿ, ಚಿಕ್ಕಮಗಳೂರು ತಿಳಿಸಿದ್ದಾರೆ

ನಕ್ಸಲ್‌ ಹೋರಾಟದ ಆರಂಭ:

ಕುದುರೆಮುಖ ಸುತ್ತಮುತ್ತಲ ಗಿರಿಜನರು ಇಲ್ಲಿನ ಸ್ವಚ್ಚಂದ ಪರಿಸರದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರು. ಇಂತಹ ಹೊತ್ತಿನಲ್ಲಿ ಸರಕಾರ 1987ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ಮಾಡಿತು. ಕಾಡಂಚಿನ ಜನರಿಗೆ ತಮ್ಮ ಬದುಕಿನ ಅಭದ್ರತೆ ಕಾಡಲಾರಂಭಿಸಿತು. ಗಿರಿಜನರನ್ನು ಒಕ್ಕಲೆಬ್ಬಿಸುತ್ತಾರೆಂಬ ಆತಂಕವೂ ಎದುರಾಯಿತು.

ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಬೆಳೆದು ಬಂದ ಹಾದಿ:

ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ 2000-10ರ ಅವಧಿಯಲ್ಲಿ ತೀವ್ರತೆಯನ್ನು ಪಡೆದುಕೊಂಡಿತು. 2002 ನವೆಂಬ‌ರ್ ತಿಂಗಳಲ್ಲಿ ಕೊಪ್ಪ ತಾಲ್ಲೂಕು ಮೆಣಸಿನಹಾಡ್ಯದಲ್ಲಿ ನಕ್ಸಲ್ ಬಂದೂಕು ತರಬೇತಿ ಸಂದರ್ಭದಲ್ಲಿ ಹಾರಿದ ಗುಂಡು ಗ್ರಾಮದ ಚೀರಮ್ಮ ಎಂಬ ಮಹಿಳೆ ಕಾಲಿಗೆ ತಗುಲಿತ್ತು. ಇದರಿಂದ ಮಲೆನಾಡು ಭಾಗದಲ್ಲಿ ಶಸಸ್ತ್ರ ಚಟುವಟಿಕೆಯೊಂದು ನಡೆಯುತ್ತಿದೆ ಎಂಬ ಗುಮಾನಿ ಎದ್ದಿತು.

ಬಂದೂಕಿನ ಮೂಲಕ ನ್ಯಾಯ ಪಡೆಯಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ ‘ನಕ್ಸಲ್ ಚಳುವಳಿ’ ನಿಧಾನವಾಗಿ ಮಲೆನಾಡಿನಲ್ಲಿ ತೀವ್ರತೆ ಪಡೆದುಕೊಳ್ಳುತ್ತಾ ಹೋಯಿತು. ನೆತ್ತರು ಹರಿಯಲಾರಂಭಿಸಿತು. ಇದಕ್ಕೆ ಸಾಕ್ಷಿ ಎಂಬಂತೆ 2003ರ ಆಗಸ್ಟ್ 6ರಂದು ಕುದುರೆಮುಖ ಸಮೀಪದ ಸಿಂಗ್ವಾರ್ ಗ್ರಾಮದ ರಾಮಚಂದ್ರಗೌಡ್ಲು ಮನೆ ಸಮೀಪ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು. ಇದೇ ವರ್ಷದ ಡಿಸೆಂಬರ್ 29ರಂದು ಶೃಂಗೇರಿ ತಾಲ್ಲೂಕು ನೆಮ್ಮಾರ್ ಅರಣ್ಯ ಪ್ರವಾಸಿ ಮಂದಿರಕ್ಕೆ ನಕ್ಸಲರು ಬೆಂಕಿ ಹಚ್ಚಿದರು. ಇಂತಹ ಘಟನೆಗಳು ಪದೇ ಪದೇ ನಡೆಯಲಾರಂಭಿಸಿದವು.

ನಕ್ಸಲ್‌ ಚಳುವಳಿ ತೀವ್ರಗೊಂಡ ಕಾಲಘಟ್ಟ:

ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ ಬೇರೂರಿ ಅದಾಗಲೇ ಹೆಮ್ಮರವಾಗಿ ಬೆಳೆದಿತ್ತು. 2004ರ ಹೊತ್ತಿಗೆ ಚಳುವಳಿ ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡು ಬಿಟ್ಟಿತ್ತು. 2004ರ ಆಗಸ್ಟ್ 27ರಂದು ಶೃಂಗೇರಿ ತಾಲ್ಲೂಕು ಬುಕಡಿಬೈಲು ಸಮೀಪ ತಲಗಾರು ರಾಮೇಗೌಡ್ಲು ಮನೆ ಸಮೀಪ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು. 2004 ಅಕ್ಟೋಬ‌ರ್ 7ರಂದು ಶೃಂಗೇರಿ ತಾಲ್ಲೂಕು ಕಿಗ್ಗಾ ಸಮೀಪ ಮಘಭೈಲು ಚಂದ್ರಶೇಖರ್ ಮನೆ ಕಾವಲಿಗಿದ್ದ ಮುಖ್ಯಪೇದೆ ಮುದ್ದಪ್ಪ ಅವರನ್ನು 13 ಜನರಿದ್ದ ನಕ್ಸಲರ ತಂಡ ಅಪಹರಿಸಿತು. ಪೇದೆಯಿಂದ ಎಸ್‌ಎಲ್‌ಆರ್ ಬಂದೂಕು ಕಸಿದುಕೊಂಡು ಪೇದೆಯನ್ನು ನಕ್ಸಲರು ಬಿಡುಗಡೆ ಮಾಡಿದರು. 2004 ಅಕ್ಟೋಬರ್ 11ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬರ್ಕಣ ಜಲಪಾತ ಬಳಿ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು ನಕ್ಸಲರೊಬ್ಬರು ಗಾಯಗೊಂಡರು. ಇದೇ ವರ್ಷದ ನವೆಂಬರ್‌ 21ರಂದು ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಕಾರಣಕ್ಕೆ ತಲಗಾರು ಸಮೀಪದ ಹೆಮ್ಮಿಗೆ ಚಂದ್ರಕಾಂತ್ ಮೇಲೆ ನಕ್ಸಲರು ಮಾರಣಾಂತಿಕ ಹಲ್ಲೆ ನಡೆಸಿದರು. ಡಿಸೆಂಬರ್ 11ರಂದು ಶೃಂಗೇರಿ ತಾಲ್ಲೂಕು ಬುಕಡಿಬೈಲು ಉಮೇಶ ಅವರನ್ನು ನಕ್ಸಲರು ಕಾಡಿಗೆ ಕರೆದುಕೊಂಡು ಹೋಗಿ   ಸೌರ್ಹಾದ ಮಾತುಕತೆ ನಡೆಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts