ಸೌತ್ ಕೊರಿಯಾ(ಜ.02) ದಕ್ಷಿಣ ಕೊರಿಯಾದಲ್ಲಿ ನಡೆದ ಜೆಜು ವಿಮಾನ ಅಪಘಾತದಲ್ಲಿ 179 ಮಂದಿ ಮೃತಪಟ್ಟಿದ್ದಾರೆ.
ಅದೃಷ್ಠವಶಾತ್ ಇಬ್ಬರು ಬದುಕುಳಿದಿದ್ದಾರೆ
ಮೊನ್ನೆ ಮೊನ್ನೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಅಪಘಾತದಲ್ಲಿ ಮಡಿದಿದ್ದಾರೆ. ಇದೀಗ ಅವರ ಮುದ್ದಿನ ನಾಯಿ ಅನಾಥವಾಗಿದೆ.
ಕುಟುಂಬದ ಎಲ್ಲಾ ಸದಸ್ಯರು 2024ರ ವರ್ಷದ ಪ್ರವಾಸ ಕೈಗೊಂಡಿದ್ದರು. 9 ಮಂದಿ ಕುಟುಂಬ ಸದಸ್ಯರ ಪ್ರವಾಸದಿಂದ ಮರಳಿ ಬರಲಿಲ್ಲ. ವಿಮಾನ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಇದರ ಪರಿಣಾಮ ಇವರ ಮನೆಯಲ್ಲಿದ್ದ ನಾಯಿ ಕಳೆದ ಕೆಲ ದಿನಗಳಿಂದ ಅನ್ನ, ನೀರಿಲ್ಲದೆ ಅನಾಥವಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಿಂದ ದಕ್ಷಿಣ ಕೊರಿಯಾದ ಪ್ರಾಣಿ ಸಂಘಟನೆ ಈ ನಾಯಿಯನ್ನು ರಕ್ಷಣೆ ಮಾಡಿದೆ.
ಈ ಮಾಹಿತಿ ಆಧರಿಸಿ ಸೌತ್ ಕೊರಿಯಾ ಪ್ರಾಣಿ ಸಂಘಟನೆ ಮಡಿದ ಕುಟುಂಬದ ವಿಳಾಸಕ್ಕೆ ತಲುಪಿದೆ. ಮಾಲೀಕ, ಕುಟುಂಬ ಸದಸ್ಯರಿಲ್ಲದ ಪಡ್ಡಿಂಗ್ ನಾಯಿ ಅನಾಥವಾಗಿತ್ತು. ಆಹಾರ ನೀರು ಸರಿಯಾಗಿ ಸಿಗದೆ ಬಳಸಿತ್ತು. ಸ್ಥಳೀಯರು ಆಹಾರ ನೀರು ನೀಡಿದರೂ ನಾಯಿ ಮಾಲೀಕರಿಲ್ಲದೆ ಸರಿಯಾಗಿ ಸೇವಿಸಿಲ್ಲ.
ಅನಾಥವಾದ ನಾಯಿಯನ್ನು ಸಂಘಟನೆ ರಕ್ಷಿಸಿದೆ.
ನಾಯಿಯನ್ನು ಮನೆಯಿಂದ ರಕ್ಷಿಸಿ ಕರೆ ತಂದಿದ್ದೇವೆ ಎಂದು ಸಂಘಟನೆ ಸಿಬ್ಬಂದಿಗಳು ಹೇಳಿದ್ದಾರೆ. ನಾಯಿಯನ್ನು ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತದೆ. ಮಡಿದ ಕುಟುಂಬದ ಸದಸ್ಯರು ನಾಯಿ ಆರೈಕೆ ಮಾಡಲು ಮುಂದೆ ಬಂದರೆ ನೀಡಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.