ಪುತ್ತೂರು: ಕಡಬ ತಾಲೂಕಿನ ಸವಣೂರು ನಿವಾಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ವಿಜಯಪುರ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ್ ರೈ (42 ವ) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಈ ಹಿಂದೆ ಸುಳ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಆಗಿದ್ದರು.
ಮೃತರು ಪತ್ನಿ ರಕ್ಷಾ, ನಾಲ್ಕು ವರ್ಷದ ಮಗಳ ಸಹಿತ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇವರು ಸವಣೂರು ಬಳಿಯ ಮುಗೇರು ನಿವಾಸಿ ದಿ. ಜಯರಾಮ ರೈಯವರ ಪುತ್ರ.