ಪುತ್ತೂರು: ಬಲ್ನಾಡು ಮುದಲಾಜೆ ನಿವಾಸಿ ಲಿಯೋ ಡಿ’ಸೋಜ (67ವ.) ರವರು ಮೆದುಳು ರಕ್ತಸ್ರಾವದಿಂದ ಡಿ.28ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತ ಲಿಯೋ ಡಿ’ಸೋಜರವರು ಮೃತರಾದ ಹಿಂದಿನ ದಿನ ಸಂಜೆ ಕೋರ್ಟ್ ರಸ್ತೆಯಲ್ಲಿನ ಮಾಯಿದೆ ದೇವುಸ್ ಚರ್ಚ್ ಬಿಲ್ಡಿಂಗ್ ನಲ್ಲಿನ ಎ.ಆರ್ ಡಿ’ಸೋಜ ಜವುಳಿ ಅಂಗಡಿ ಬಳಿಯಲ್ಲಿರುವ ತನ್ನ ಪುತ್ರನ ರೋಯಲ್ ಹೂವಿನ ಅಂಗಡಿಯಲ್ಲಿ ಕುಳಿತುಕೊಂಡಿದ್ದ ಸಂದರ್ಭ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದೊಯ್ದಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದಾರೆ.
ಮೃತ ಲಿಯೋ ಡಿ’ಸೋಜರವರ ಪತ್ನಿ ಮಾಗ್ಲೆಲಿನ್ ಡಿ’ಸೋಜ, ಪುತ್ರರಾದ ರೋಯಲ್ ಫ್ಲೋರಿಸ್ಟ್ ಆಂಡ್ ಇವೆಂಟ್ಸ್ ಮಾಲಕ ಅನಿಲ್ ಡಿ’ಸೋಜ, ದುಬೈನಲ್ಲಿ ಉದ್ಯೋಗದಲ್ಲಿರುವ ಸುನಿಲ್ ಡಿ’ಸೋಜ, ಪುತ್ರಿ ಪಾಂಗ್ಲಾಯಿ ಬೆಥನಿ ಶಾಲೆಯ ಶಿಕ್ಷಕಿ ಸುನೀತಾ ಡಿ’ಸೋಜ, ಅಳಿಯ ಸಂತೋಷ್ ಕ್ರಾಸ್ತಾ, ಸೊಸೆ ನಯನಾ ಡಿ’ಸೋಜರವರನ್ನು ಅಗಲಿದ್ದಾರೆ.