Gl harusha
ಅಪರಾಧ

ವರ್ಕ್ ಫ್ರಾಮ್ ಹೋಂ ಕೆಲಸದ ಹೆಸರಿನಲ್ಲಿ 20 ಲಕ್ಷ ರೂ. ವಂಚನೆ!!

ವರ್ಕ್ ಫ್ರಾಮ್ ಹೋಮ್ (work from home)​​ ಕೆಲಸದ ಆಮಿಷವೊಡ್ಡಿ ಮಹಿಳೆಯರಿಬ್ಬರಿಂದ ಬರೋಬ್ಬರಿ 20 ಲಕ್ಷ ರೂ. ವಂಚನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಕನಕಪುರ ತಾಲೂಕು ದೊಡ್ಡ ಆನಮಾನಹಳ್ಳಿಯ ಎಸ್.ಶಾಲಿನಿ ಎಂಬ ಮಹಿಳೆ 16 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡರೆ, ಚನ್ನಪಟ್ಟಣ ಟೌನ್ ಮದೀನ ಚೌಕ್ ನಿವಾಸಿ ಶಾಹಿದಾ ಬಾನು 3,46,000 ರೂ. ಹಣ ಕಳೆದುಕೊಂಡಿದ್ದಾರೆ. ಸದ್ಯ ರಾಮನಗರ ಸೆನ್ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

srk ladders
Pashupathi
Muliya

ಡಿ.10 ರಂದು ಶಾಲಿನಿ ಅವರಿಗೆ ವರ್ಕ್ ಫ್ರಾಮ್ ಹೋಮ್​​ ಕೆಲಸ ಇದೆ ಎಂದು ಫೋನ್​ ಕರೆ ಬಂದಿದೆ. ಕೆಲಸ ಮಾಡುವುದಾಗಿ ಶಾಲಿನಿ ಒಪ್ಪಿಕೊಂಡಿದ್ದಾರೆ. ಬಳಿಕ ಅವರ ಮೊಬೈಲ್ ವಾಟ್ಸ್​ಆ್ಯಪ್​​ ಲಿಂಕ್​ವೊಂದು ಕಳುಹಿಸಿದ್ದು, ಟೆಲಿಗ್ರಾಮ್ ಗ್ರೂಪ್​ಗೂ ಆ್ಯಡ್ ಮಾಡಿದ್ದಾರೆ.

ಒಂದು ರಿವಿವ್ಯೂ ಗೆ 40 ರೂ. ನಂತೆ 1 ರಿಂದ 6 ಟಾಸ್ಕ್, 5 ಗೂಗಲ್ ರಿವಿವ್ಯೂಗಳು ಮತ್ತು 1 ಡಾಟಾ ಟಾಸ್ಕ್ ಮಾಡಿದರೆ 500 ರೂ. ಹಣ ನೀಡಲಾಗುತ್ತದೆ. ಒಂದು ಡಾಟಾ ಟಾಸ್ಕ್ ಮಾಡುವುದಕ್ಕೆ 1010 ರೂ. ಸಾವಿರಕ್ಕೆ ಒಟ್ಟು 1500 ರೂ. ಬರುತ್ತದೆ ಎಂದು ವಂಚಕರು ಹೇಳಿದ್ದಾರೆ. ಅವರು ಹೇಳಿದಂತೆಯೇ ಬಂದ 1500 ಹಣ ಅದ್ರಲ್ಲಿ ಶಾಲಿನಿ 500 ರೂ. ಲಾಭ ಪಡೆದುಕೊಂಡಿದ್ದಾರೆ.

12 ಟಾಸ್ಕ್ ಮಾಡಿದರೆ 900 ರೂ. ಹಣ ನೀಡುವುದಾಗಿ ಹೇಳಿದ ವಂಚಕರು, ಒಂದು ಡಾಟಾ ಟಾಸ್ಕ್​ಗೆ 3010 ರೂ ಆಗಲೂ 2 ಸಾವಿರದಷ್ಟು ಲಾಭ. 15 ಟಾಸ್ಕ್ 5 ಗೂಗಲ್ ರಿವಿವ್ಯೂ ಮತ್ತು 1 ಡಾಟಾ ಟಾಸ್ಕ್ ಮಾಡಿದರೆ 1200 ರೂ. ಬರುತ್ತದೆಂದು ಹೇಳಿದ ವಂಚಕರು, ಆಗ 7010 ರೂ. ಹಣವನ್ನು ಶಾಲಿನಿ ಕಟ್ಟಿದ್ದಾರೆ. ಆಗ ಯಾವುದೇ ಹಣ ವಾಪಸ್ ಬಂದಿಲ್ಲ. ಹಣ ಬಂದಿಲ್ಲವೆಂದು ಕೇಳಿದಾಗ ನೀವು ತಪ್ಪಾಗಿ ಹಣ ಹಾಕಿದ್ದೀರಿ ಎಂದು ಹೇಳಿದ್ದಾರೆ. ಬಳಿಕ ಹಣ ಬಂದಿಲ್ಲ ಬಂದಿಲ್ಲವೆಂದು ಹೇಳುತ್ತಲೇ 28,960 ರೂ. ಹಾಕಿಸಿಕೊಂಡಿದ್ದಾರೆ. ನೀವು ಹಾಕಿದಷ್ಟು ಹಣ ನಾವು ಹೆಚ್ಚು ಕೊಡಬೇಕಾಗುತ್ತದೆ. ದಯವಿಟ್ಟು ಹಣ ತಪ್ಪಾಗಿ ಹಾಕಬೇಡಿ ಎನ್ನುತ್ತಲೇ ಹಣ ಹಾಕಿಸಿಕೊಂಡ ವಂಚಕರು, ಒಟ್ಟು 16,55,556 ರೂ. ಗಳನ್ನು ವರ್ಗಾವಣೆ ಮಾಡಿಸಿಕೊಂಡು ಬಳಿಕ ಮೋಸ ಮಾಡಿದ್ದಾರೆ.

ಇತ್ತ ಚನ್ನ‌ಪಟ್ಟಣದಲ್ಲೂ ಇದೇ ರೀತಿ ಮೋಸದಾಟವಾಡಲಾಗಿದೆ. ಶಾಹಿದಾ ಬಾನುರವರ ಮೊಬೈಲ್ ನಂಬರ್​​ಗೆ ಕರೆ ಮಾಡಿರುವ ವಂಚಕರು, ವರ್ಕ್ ಫ್ರಾಮ್ ಹೋಮ್ ಕೆಲಸದ ಆಫರ್ ನೀಡಿದ್ದಾರೆ. ರಿವ್ಯೂವ್ ಡೇಟಾ ಕಳಿಸಿ ಒಟ್ಟು‌ 3‌ಲಕ್ಷ 46 ಸಾವಿರ ರೂ. ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts