ಅಪರಾಧ

ಉಪ್ಪಳ: 50 ಲಕ್ಷ ದರೋಡೆಗೈದ ಆರೋಪಿ ಬಂಧನ.!!

ಎಟಿಎಂ ಗೆ ಹಣ ತುಂಬಿಸಲೆಂದು ನಿಂತಿದ್ದ ವಾಹನದಿಂದ 50 ಲಕ್ಷ ರೂಗಳನ್ನು  ಹಾಡುಹಗಲೇ ಅಪಹರಿಸಿ ದರೋಡೆಗೈದು ತಲೆಮರೆಸಿಕೊಂಡಿದ್ದ  ಕುಖ್ಯಾತ ಆರೋಪಿ ತಂಡವನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಳ ಪೇಟೆಯಲ್ಲಿ ಎಟಿಎಂ ಗೆ ಹಣ ತುಂಬಿಸಲೆಂದು ನಿಂತಿದ್ದ ವಾಹನದಿಂದ 50 ಲಕ್ಷ ರೂಗಳನ್ನು  ಹಾಡುಹಗಲೇ ಅಪಹರಿಸಿ ದರೋಡೆಗೈದು ತಲೆಮರೆಸಿಕೊಂಡಿದ್ದ  ಕುಖ್ಯಾತ ಆರೋಪಿ ತಂಡವನ್ನು ಬಂಧಿಸಲಾಗಿದೆ.

akshaya college

ಜಿಲ್ಲಾ ಪೋಲೀಸ್‌ ವರಿಷ್ಠರ ನಿರ್ದೇನದಂತೆ ವೇಷಪಲ್ಲಟಗೈದು ತನಿಖಾ ನಿರತರಾದ ಪೋಲಿಸ್ ತಂಡ ಆರೋಪಿಯನ್ನು ಬಂಧಿಸಿದೆ.

ತಮಿಳು ನಾಡು ತೃಚ್ಛಿ ರಾಂಜೀನಗರ ತಿರುಟ್ಟಾಗ್ರಾಮದ ಕಾರ್ವಣ್ರನ್ (28) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.

ಕಳೆದ 2024 ಮಾರ್ಚ್ ತಿಂಗಳಲ್ಲಿ 

ಪ್ರಧಾನ ಆರೋಪಿ ಕಾರ್ವಣ್ರನ್ ತಮಿಳುನಾಡಿನ ತನ್ನೂರಿಗೆ ತಲುಪಿದ್ದಾನೆಂಬ ಸುಳಿವಿನ ಹಿನ್ನೆಲೆಯಲ್ಲಿ ವೇಷ ಮರೆಸಿ ತೆರಳಿದ ಪೋಲೀಸರು ಸಾಹಸಿಕವಾಗಿ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬೆನ್ನಟ್ಟಿ ಸೆರೆಹಿಡಿದರು. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಈ ಮೊದಲೇ ಬಂಧಿಸಲಾಗಿತ್ತು. ಬಂಧಿತನನ್ನು ಕಾಸರಗೋಡಿಗೆ ಕರೆ ತರಲಾಗಿದೆ.

ಪ್ರದೇಶದ ಸಿಸಿಟಿವಿ ಮೂಲಕ ಆರೋಪಿಗಳನ್ನು ಗುರುತಿಸಿ ಪೋಲೀಸರು ಕಾರ್ಯಾಚರಣೆ ನಡೆಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts