Gl harusha
ಅಪರಾಧ

ಪತ್ನಿ, ಮಗುವನ್ನು ಹತ್ಯೆಗೈದ ಪತಿ ಕಾರ್ತಿಕ್ ಭಟ್ ಆತ್ಮಹತ್ಯೆ!!

ಮೂಲ್ಕಿ ಸಮೀಪದ ಪಕ್ಷಿಕೆರೆಯ ಕಾರ್ತಿಕ್ ಭಟ್ (32)ಎಂಬವರು ಪತ್ನಿ ಮಗುವನ್ನು ಹತ್ಯೆಗೈದು ತಾನೂ ಅತ್ಮಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಕಿನ್ನಿಗೋಳಿ: ಮೂಲ್ಕಿ ಸಮೀಪದ ಪಕ್ಷಿಕೆರೆಯ ಕಾರ್ತಿಕ್ ಭಟ್ (32)ಎಂಬವರು ಪತ್ನಿ ಮಗುವನ್ನು ಹತ್ಯೆಗೈದು ತಾನೂ ಅತ್ಮಹತ್ಯೆ ಮಾಡಿದ ಘಟನೆ ಶನಿವಾರ(ನ.9) ಬೆಳಕಿಗೆ ಬಂದಿದೆ.

Pashupathi

ಮೃತರನ್ನು ಪ್ರಿಯಾಂಕ ((28) ಹೃದಯ್ (4) ಎಂದು ಗುರುತಿಸಲಾಗಿದೆ.

akshaya college

ಆರೋಪಿ ಕಾರ್ತಿಕ್ ಪಕ್ಷಿಕೆರೆಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಮತ್ತು ಮಗುವನ್ನು ಹತ್ಯೆಗೈದು ಬಳಿಕ ಮೂಲ್ಕಿಯ ಬೆಳಾಯರುಲ್ಲಿ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶುಕ್ರವಾರ ಮಧ್ಯಾಹ್ನ ಯುವಕ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸುವಾಗ ಅತ್ಮಹತ್ಯೆ ಮಾಡಿಕೊಂಡವನು ಪಕ್ಷಿಕೆರೆಯ ಕಾರ್ತಿಕ್ ಭಟ್ ಎಂದು ತಿಳಿದಿದ್ದು ಮನೆಗೆ ಬಂದಾಗ ಪತ್ನಿ ಮಗು ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಾವು ಭಯಾನಕವಾಗಿದ್ದು, ದುರಂತಕ್ಕೆ ಕಾರಣ ಏನು ಅನ್ನೋದು ಸದ್ಯ ಬಯಲಾಗಿಲ್ಲ.

ಮುಲ್ಕಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts