ನಗರಸಭೆ ಅಧಿಕಾರಿಯೊಬ್ಬರು ವ್ಯಾಪಾರಕ್ಕೆಂದು ಸ್ಥಳಗಳನ್ನು ಅಕ್ರಮವಾಗಿ ಅತಿಕ್ರಮಣಗೊಳಿಸಿದ ಬೀದಿ ಬದಿ ವ್ಯಾಪಾರಿಗಳನ್ನು ಪತ್ತೆ ಹಚ್ಚಿ, ವ್ಯಾಪಾರಿಗಳನ್ನು ತಲೆ ಕೆಳಗಾಗಿ ನಿಲ್ಲಿಸಿ ಶಿಕ್ಷಿಸುತ್ತಿರುವ ವೀಡಿಯೊವೊಂದು ಶುಕ್ರವಾರ (ಅ.10) ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಸ್ಥಳೀಯ ವ್ಯಾಪಾರಿಗಳನ್ನು ಶಿಕ್ಷಿಸುತ್ತಿರುವ ಸಿವಿಕ್ ಬಾಡಿ ಅಧಿಕಾರಿಗಳ ವಿಡಿಯೋ ಕುರಿತಾಗಿ ಸೋಮವಾರ (ಅ.13) ಅಯೋಧ್ಯಾ ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ.
ತಮ್ಮ ಎಕ್ಸ್ ನಲ್ಲಿ ವಿಡಿಯೋವನ್ನು ಹಂಚಿಕೊಂಡ ಕಾಂಗ್ರೆಸ್ ಪಕ್ಷವು, ಅಯೋಧ್ಯಾ ಮಹಾನಗರ ಪಾಲಿಕೆಯ ವರ್ತನೆಯನ್ನು “ತಾಲಿಬಾನಿ ವರ್ತನೆ” ಎಂದು ಟೀಕಿಸಿದೆ.
ಪುರಸಭೆಯೊಂದಿಗೆ ಸಂಪರ್ಕ ಹೊಂದಿರುವ ಜನರು ಬೀದಿ ಬದಿ ವ್ಯಾಪಾರಿಗಳನ್ನು ಸಿಟ್-ಅಪ್ಸ್ ಮಾಡುವಂತೆ ಹೇಳಿದ್ದು, ಗೋಡೆಗೆ ತಲೆಕೆಳಗಾಗಿ ನಿಲ್ಲುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಕೋಲುಗಳಿಂದ ಬೆದರಿಕೆ ಹಾಕಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ವರದಿಗಳ ಪ್ರಕಾರ, ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಒಂದು ಡಜನ್‌ಗೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳನ್ನು ಬಂಧಿಸಿ ದಂಡ ವಿಧಿಸಲಾಗಿದೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ನಂತರ ವಿಡಿಯೋ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.