ಮಂಗಳೂರು: ನಗರದ ಕಾರ್ ಸ್ಟ್ರೀಟ್ ಬಳಿ ನಡೆದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಅಪ್ರಾಪ್ತ ಬಾಲಕನೂ ಸೇರಿದ್ದು. ದರೋಡೆಗೆ ಬೇಕಾದ ಮಾಹಿತಿ ಒದಗಿಸಿದವನು ಇವರೇ ಎಂದು ತಿಳಿದುಬಂದಿದೆ.
ದಿನಾಂಕ 26 09 2025 ರ ಬೆಳಗ್ಗೆ 8:458 ಸುಮಾರಿಗೆ ಚಾಯ್ಸ್ ಗೋಲ್ಡ್ ಅಂಗಡಿಯ ಕೆಲಸಗಾರ ಮುಸ್ತಾಫಾ ಅವರು ತಮ್ಮ ಸ್ಕೂಟರ್ (KA 19EZ 2079) ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಕಾರ್ ಸ್ಟ್ರೀಟ್ನಲ್ಲಿರುವ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.
ದರೋಡೆಯ ವಿವರಗಳು:
ಇಬ್ಬರು ಆರೋಪಿಗಳು ಸ್ಕೂಟರಿನಲ್ಲಿ ಬಂದು ಮುಸ್ತಾಫಾ ಅವರನ್ನು ತಡೆದಿದ್ದಾರೆ. ಅದೇ ಸಮಯದಲ್ಲಿ, ಇನ್ನಿತರ ಆರೋಪಿಗಳು ಕಾರೊಂದರಲ್ಲಿ ಬಂದು ಮುಸ್ತಾಫಾ ಅವರನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಹೋಗಿದ್ದಾರೆ. ಕಾರಿನಲ್ಲಿ ಹಲ್ಲೆ ನಡೆಸಿ, ನಂತರ ಮಂಗಳೂರು ಎಕ್ಕೂರು ಬಳಿ ಅವರನ್ನು ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 0 137(2), 310(2) BNS-2023 03 ದಾಖಲಾಗಿ, ತನಿಖೆ ಕೈಗೊಳ್ಳಲಾಗಿತ್ತು. ಕೃತ್ಯದ ಸಿಸಿಟಿವಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಬಂಧಿತ ಆರೋಪಿಗಳು:
ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಸೆ .26ರಂದು ಈ ಕೆಳಗಿನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ:
ಫಾರಿಶ್ (18 ವರ್ಷ): ಅಬ್ದುಲ್ ಲತೀಫ್ ಅವರ ಪುತ್ರ. ಮುಲ್ತಾಝ್ ಕಾಂಪ್ಲೆಕ್ಸ್, ಒಂದನೇ ಮಹಡಿ, ಕೆ.ಸಿ.ರೋಡ್, ಕೋಟೆಕಾರು ಅಂಚೆ ಮತ್ತು ಗ್ರಾಮ. ಉಳ್ಳಾಲ ತಾಲ್ಲೂಕು ನಿವಾಸಿ.
- ಸಫ್ಘಾನ್ (23 ವರ್ಷ): ಹಸನಬ್ಬ ಅವರ ಪುತ್ರ. ಮಹಮ್ಮದ್ ಕಂಪೌಂಡ್. ಮುಕ್ಕಚೇರಿ, ಉಳ್ಳಾಲ ಗ್ರಾಮ, ಉಳ್ಳಾಲ ತಾಲ್ಲೂಕು ನಿವಾಸಿ.
- ಅರಾಫತ್ ಆಲಿ (18 ವರ್ಷ): ಮೊಹಮ್ಮದ್ ಬಶೀರ್ ಅವರ ಪುತ್ರ, ಮಾಸ್ತಿಕಟ್ಟೆ, ಉಳ್ಳಾಲ ತಾಲ್ಲೂಕು ನಿವಾಸಿ.
- ಫರಾಝ್ (19 ವರ್ಷ): ಇಸ್ಮಾಯಿಲ್ ಅವರ ಪುತ್ರ. ಉಳ್ಳಾಲ ದರ್ಗಾ ಸಮೀಪ, ಉಳ್ಳಾಲ, ಮಂಗಳೂರು ನಿವಾಸಿ.
- ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ: (ಹೆಸರು ಬಹಿರಂಗಪಡಿಸಿಲ್ಲ)
- ಬಾಲಕನ ಪಾತ್ರ ಮತ್ತು ಪೂರ್ವಯೋಜಿತ ಕೃತ್ಯ: ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನು ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಇದೇ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಫಾರಿಶ್ ಎಂಬಾತನ್ನು ಈ ಬಾಲಕನಲ್ಲಿ ಚಿನ್ನದ ಗಟ್ಟಿ ಸಾಗಣೆಯ ಮಾಹಿತಿಯನ್ನು ನೀಡುವಂತೆ ತಿಳಿಸಿದ್ದನು. ಅದರಂತೆ, ಮುಸ್ತಾಫಾ ಅವರು ಸೆ 26ರಂದು ರಾತ್ರಿ 8:30 ಗಂಟೆಗೆ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಶುದ್ದೀಕರಿಸಲು ರಥಬೀದಿಯ ಸಂತೋಷ್ ಎಂಬವರ ಅಂಗಡಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ಮಾಹಿತಿಯನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಆರೋಪಿ ಫಾರಿಲ್ಲೆ ರವಾನಿಸಿದ್ದಾನೆ.
- ಈ ಮಾಹಿತಿಯ ಆಧಾರದ ಮೇಲೆ, ಆರೋಪಿಗಳು ಪೂರ್ವಯೋಜಿತ ಸಂಚು ರೂಪಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಲು ಯೋಜನೆ ರೂಪಿಸಿದ್ದರು. ಆರೋಪಿ ಸಫ್ಘಾನ್ ದರೋಡೆಗೆ ಬೇಕಾದ ಕಾರನ್ನು ಒದಗಿಸಿದ್ದಾನೆ.ಮುಸ್ತಾಫರವರು ಜಿಎಚ್‌ಎಸ್ ರಸ್ತೆಯ ಮೂಲಕ ರಥಬೀದಿ ವೆಂಕಟರಮಣ ದೇವಸ್ಥಾನದ ಬಳಿ ಬಂದಾಗ,ಆರೋಪಿಗಳಾದ ಅರಾಫತ್ ಆಲಿ ಮತ್ತು ಫರಾಝ್ ಸುಜುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ನಂತರ, ಸಫ್ಘಾನ್ ಒದಗಿಸಿದ ಬಿಳಿ ಬಣ್ಣದ ಕಾರಿನಲ್ಲಿ ಬಂದ ಉಳಿದ ಆರೋಪಿಗಳು ಮುಸ್ತಾಫಾ ಅವರನ್ನು ಅಪಹರಿಸಿ, ಹಲ್ಲೆ ನಡೆಸಿ. ಎಕ್ಕೂರು ಬಳಿ ಇಳಿಸಿ ಚಿನ್ನದ ಗಟ್ಟಿಯನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕೃತ್ಯಕ್ಕೆ ಬಳಸಿದ ಸುಜುಕಿ ಆಕ್ಸೆಸ್ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ದರೋಡೆ ಮಾಡಿದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲು ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ), ಮಂಗಳೂರು ನಗರ, ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ, ಮತ್ತು ಸಹಾಯಕ ಪೊಲೀಸ್ ಆಯುಕ್ತರು, ಸಿಸಿಬಿ ಘಟಕ ಮಂಗಳೂರು ರವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿ ಹಾಗೂ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
9