ವಾಷಿಂಗ್ಟನ್: ವಾಷಿಂಗ್ ಮೆಷಿನ್ ಬಳಸುವ ವಿಚಾರಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ ಅಮೆರಿಕಾದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ಶಿರಚ್ಛೇದ ಮಾಡಲಾಗಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಬುಧವಾರ (ಸೆ.10) ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು ಕರ್ನಾಟಕ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ (50) ಎಂದು ಗುರುತಿಸಲಾಗಿದೆ. ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ.
ಪತ್ನಿ ಮತ್ತು ಪುತ್ರನ ಎದುರೇ ಈ ಘಟನೆ ನಡೆದಿದ್ದು ಇಬ್ಬರು ಆಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ,
ಪತ್ನಿ ಮತ್ತು ಪುತ್ರನ ಎದುರೇ ಈ ಘಟನೆ ನಡೆದಿದ್ದು ಇಬ್ಬರು ಆಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ,
ನಾಗಮಲ್ಲಯ್ಯ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ವೇಳೆ ಹೋಟೆಲ್ ಸ್ವಚ್ಛಗೊಳಿಸಲು ಮಾರ್ಟಿನೆಜ್ ಮತ್ತು ಇನ್ನೋರ್ವ ಮಹಿಳಾ ಸಹೋದ್ಯೋಗಿ ಬಂದಿದ್ದರು ಎನ್ನಲಾಗಿದೆ ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ನಾಗಮಲ್ಲಯ್ಯ ಮುರಿದು ಹೋದ ವಾಷಿಂಗ್ ಮೆಚಿನ್ ನಲ್ಲಿ ಬಟ್ಟೆಗಳನ್ನು ಹಾಕಬೇಡಿ ಎಂದು ನೇರವಾಗಿ ಮಾರ್ಟಿನೆಜ್ ಗೆ ಹೇಳುವ ಬದಲು ಮಹಿಳಾ ಸಹೋದ್ಯೋಗಿ ಬಳಿ ಹೇಳಿದ್ದರು ಎನ್ನಲಾಗಿದೆ ಇದರಿಂದ ಕೋಪಗೊಂಡ ಮಾರ್ಟಿನೆಜ್ ಕೊಠಡಿ ಒಳಗಿಂದ ಹರಿತವಾದ ಆಯುಧ ತಂದು ನಾಗಮಲ್ಲಯ ಮೇಲೆ ದಾಳಿ ಮಾಡಿದ್ದಾನೆ ಈ ಕೂಡಲೇ ಆತನಿಂದ ತಪ್ಪಿಸಿಕೊಂಡು ಒಡಲು ಯತ್ನಿಸಿದರು ಬೆನ್ನತ್ತಿದ್ದ ಮಾರ್ಟಿನೆಜ್ ನಾಗಮಲ್ಲಯ್ಯನ ಮೇಲೆ ದಾಳಿ ನಡೆಸಿ ಶಿರಚ್ಛೇದ ಮಾಡಿದ್ದಾನೆ.