ಅಪರಾಧ

ನೇಪಾಲ: ಜೈಲು ಸಿಬ್ಬಂದಿ – ಕೈದಿಗಳ ನಡುವೆ ಸಂಘರ್ಷ!! ಜೈಲಿನಿಂದ ಪರಾರಿಯಾದ ಕೈದಿಗಳ ಸಂಖ್ಯೆ ಎಷ್ಟು ಗೊತ್ತೇ?

ಈ ಸುದ್ದಿಯನ್ನು ಶೇರ್ ಮಾಡಿ

ಕಾಲ್ಮಂಡು: ಗಲಭೆ ಪೀಡಿತ ನೇಪಾಲದ ಜೈಲೊಂದರಲ್ಲಿ ಭದ್ರತ ಸಿಬಂದಿ ಹಾಗೂ ಕೈದಿಗಳ ನಡುವೆ ಗುರುವಾರ ಸಂಘರ್ಷ ಉಂಟಾಗಿದ್ದು, 3 ಕೈದಿಗಳು ಮೃತಪಟ್ಟು 13ಕ್ಕೂ ಹೆಚ್ಚು ಕೈದಿಗಳು ಗಾಯಗೊಂಡಿದ್ದಾರೆ. ಇದೇವೇಳೆ ನೇಪಾಲದಾದ್ಯಂತ ಸುಮಾರು 25 ಜೈಲುಗಳಿಂದ 15 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ.

akshaya college

ಜೈಲುಗಳಿಂದ ತಪ್ಪಿಸಿಕೊಂಡಿರುವವರಲ್ಲಿ ಕೆಲವರು ಭಾರತಕ್ಕೆ ನುಸುಳುವ ಪ್ರಯತ್ನ ಮಾಡಿದ್ದಾರೆ. ಗಲಭೆ ಆರಂಭವಾದಾಗಿನಿಂದ ನೇಪಾಲದಲ್ಲಿ 8 ಕೈದಿಗಳು ಮೃತಪಟ್ಟಿ ದ್ದಾರೆ. ಜೈಲಿನ ಗೋಡೆ ಮುರಿದು ತಪ್ಪಿಸಿಕೊಳ್ಳಲು ಕೈದಿಗಳು ಯತ್ನಿಸಿದಾಗ ಜೈಲು ಸಿಬಂದಿ ಜತೆ ಸಂಘರ್ಷ ಉಂಟಾಗಿ ಈ ವೇಳೆ ಈ ಸಾವುಗಳು ಸಂಭವಿಸಿವೆ. ನೇಪಾಲದಲ್ಲಿನ ಯುವ ಪ್ರತಿಭಟನಕಾರರು ಮಂಗಳವಾರ ದೇಶದಲ್ಲಿನ ಹಲವು ಜೈಲುಗಳಿಗೆ ಮುತ್ತಿಗೆ ಹಾಕಿ ಅಲ್ಲಿನ ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ.

ಸುಮಾರು 60 ಕೈದಿಗಳನ್ನು ಬಂಧಿಸಿದ ಭಾರತದ ಗಡಿ ಭದ್ರತಾ ಪಡೆ

ನೇಪಾಲದ ಹಲವು ಜೈಲುಗಳಿಂದ ಪರಾರಿಯಾಗಿ ಅಂತಾರಾಷ್ಟ್ರೀಯ ಗಡಿಯ ಹಲವೆಡೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಸುಮಾರು 60 ನೇಪಾಲಿ ಕೈದಿಗಳನ್ನು ಗುರುವಾರ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದ ಸಿಬಂದಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಲದೊಂದಿಗೆ ನೇಪಾಲ ಹೊಂದಿರುವ ಗಡಿಯಲ್ಲಿ ಕಳೆದ 2 ದಿನಗಳಿಂದ ಈ ಬಂಧನಗಳು ನಡೆದಿವೆ ಎನ್ನಲಾಗಿದೆ. ಇನ್ನು ಬಂಧಿತರನ್ನು ಆಯಾ ರಾಜ್ಯ ಪೊಲೀಸರಿಗೆ ಒಪ್ಪಿಸಲಾಗಿದ್ದು ಅವರು ಬಂಧಿತರನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ವಿಮಾನದ ಮೂಲಕ ಆಂಧ್ರದ 144 ಮಂದಿ ಪ್ರಯಾಣ

ಗಲಭೆ ಪೀಡಿತ ನೇಪಾಲದಲ್ಲಿ ಸಿಲುಕಿದ್ದ ಆಂಧ್ರಪ್ರದೇಶ ಮೂಲದ 144 ಮಂದಿ ಕಾಶ್ಮೀಂಡುವಿನಿಂದ ವಿಶೇಷ ವಿಮಾನದಲ್ಲಿ ವಿಶಾಖಪಟ್ಟಣಂ ಹಾಗೂ ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಆಂಧ್ರದ ಸಚಿವ ನಾರಾ ಲೋಕೇಶ್ ಗುರುವಾರ ಟ್ವಿಟ್ ಮೂಲಕ ತಿಳಿಸಿದ್ದಾರೆ. ಆಂಧ್ರ ಮೂಲದ 150ಕ್ಕೂ ಹೆಚ್ಚು ಮಂದಿ ಕಾಡ್ಕಂಡು ವಿಮಾನ ನಿಲ್ದಾಣದಲ್ಲಿ ಪ್ರಕ್ರಿಯೆ ಮುಗಿಸಿದ್ದಾರೆ ಎಂದು ಆಂಧ್ರ ಸರಕಾರ ತಿಳಿಸಿದೆ.

ಭಾರತೀಯರ ಕರೆತರಲು ವಿಶೇಷ ವಿಮಾನ ಸೇವೆ?

ಹಿಂಸಾಪೀಡಿತ ನೇಪಾಲದಲ್ಲಿ ಸಿಲುಕಿ ರುವ ಭಾರತೀಯರನ್ನು ಕರೆತರಲು ಭಾರತದಿಂದ ವಿಶೇಷ ವಿಮಾನ ಗಳನ್ನು ನೇಪಾಲಕ್ಕೆ ಕಳುಹಿಸಲಾಗು ತ್ತದೆ ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ. ಹೆಚ್ಚು ವರಿ ವಿಮಾನಗಳನ್ನು ಹಾರಿಸುವುದಾಗಿ ಏರಿಂಡಿಯಾ ಹೇಳಿದೆ.

ಜೆನ್ ಜಿ ಹೋರಾಟಗಾರರ ನಡುವೆಯೇ ಸಂಘರ್ಷ

ಜೆನ್ ಜಿ ದಂಗೆಯಿಂದಾಗಿ ಕೆ.ಪಿ.ಓಲಿ ಸರಕಾರ ಮಂಗಳವಾರ ಪತನವಾದ ಬಳಿಕ ಮಧ್ಯಾಂತರ ಸರಕಾರ ರಚನೆಯು ಗುರುವಾರದ ಹೊತ್ತಿಗೆ ಕಗ್ಗಂಟಾಗಿದೆ ಪರಿಣ ಮಿಸಿದೆ. ಓಲಿ ಸರಕಾರದ ವಿರುದ್ಧ ದಂಗೆ ಎದ್ದಿದ್ದ ಜೆನ್ ಜಿ ಪ್ರತಿಭಟನಕಾರರು ಬುಧವಾರ, ಮಾಜಿ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಾಂತರ ಸರಕಾರ ಮುನ್ನಡೆಸಲು ಆಯ್ಕೆ ಮಾಡಿದ್ದರು. ಆದರೆ, ಗುರುವಾರ ಮಧ್ಯಾಹ್ನದ ಹೊತ್ತಿಗೆ ಜೆನ್‌ ಜಿ ಪ್ರತಿಭಟನಕಾರರು ನಡುವೆ ಈ ಬಗ್ಗೆ ಭಿನ್ನಾಭಿಪ್ರಾಯ ತಲೆದೋರಿದ್ದು, ಮತ್ತೊಂದು ಗುಂಪು ಕಾಶ್ಮೀಂಡು ಮೇಯರ್ ಬಾಲೆನ್ ಶಾ ನೇತೃತ್ವಕ್ಕೆ ಪಟ್ಟು ಹಿಡಿದಿವೆ. ಈ ಮಧ್ಯೆ, ನೇಪಾಲದ ಎಂಜಿನಿಯರ್ ಕುಲ್‌ವುನ್ àಸಿಂಗ್ ನಾಯಕತ್ವಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ.

ಕೈ ಕೈಮಿಲಾಯಿಸಿದ ಪ್ರತಿಭಟನಕಾರರು: ನಾಯಕತ್ವ ಕುರಿತು ಉಂಟಾಗಿರುವ ಭಿನ್ನಾಭಿಪ್ರಾಯ ಕುರಿತು ಹಾಗೂ ಸಂಘರ್ಷದ ಕುರಿತು ಖಬರ್‌ಹಬ್ ವರದಿ ಮಾಡಿದ್ದು, ಸೇನಾ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನಕಾ ರನೊಬ್ಬ ಮತ್ತೂಬ್ಬ ಪ್ರತಿಭಟನಕಾರನಿಗೆ ಗುದ್ದುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. ಎರಡೂ ಗುಂಪುಗಳನ್ನು ನಿಯಂತ್ರಿಸಲು ಸೇನೆ ಹರಸಾಹಸ ನಡೆಸಿತು.

ಮಧ್ಯಾಂತರ ಸರಕಾರ ರಚನೆ ಇನ್ನೂ ನಿಗೂಢ: ಮಧ್ಯಾಂ ತರ ಸರಕಾರದ ಮುಖ್ಯಸ್ಥ

ಸ್ಥಾನಕ್ಕೆ ಪ್ರತಿಭಟನಕಾರರ ನಡುವೆ ಒಮ್ಮತ ಇಲ್ಲದ ಕಾರಣ ಸರಕಾರ ಸದ್ಯಕ್ಕೆ ರಚನೆಯಾಗುವುದರ ಬಗ್ಗೆ ಗೊಂದಲ ಮುಂದುವರಿದಿದೆ. ಪ್ರತಿಭಟನಕಾರರು 3 ದಿನದಲ್ಲಿ ಮೂವರ ಹೆಸರನ್ನು ಸೂಚಿಸಿದ್ದು, ಭಾರೀ ಗೊಂದಲಕ್ಕೆ ಕಾರಣವಾಗಿದೆ.

ನಾಯಕತ್ವ: ಹೊಸ ಪ್ರಸ್ತಾವ

ನೇಪಾಲ ಮಧ್ಯಾಂತರ ಸರಕಾರ ಹೊಣೆ ಹೊರಲು ಎಂಜಿನಿಯರ್ ಕುಲ್‌ವುನ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ನೇಪಾಲ ವಿದ್ಯುತ್ ಬಿಕ್ಕಟ್ಟು ಬಗೆಹರಿ ಸಿದ ಖ್ಯಾತಿ ಇವರಿಗಿದೆ. ಇವರೂ ಜೆಮ್‌ಷೆಡ್‌ಪುರದಲ್ಲಿ ತಮ್ಮ ಎಂಜಿನಿಯರಿಂಗ್ ಪದವಿ ಪಡೆದು ಕೊಂಡಿದ್ದಾರೆ. ಬುಧ ವಾರ ಸಭೆ ನಡೆಸಿದ್ದ ಜೆನ್ ಜಿ ಪ್ರತಿಭಟನ ಕಾರರು ಸುಶೀಲಾ ಕರ್ಕಿ ಮತ್ತು ಬಾಲೆನ್ ಸಿಂಗ್ ಹೆಸರು ಆಯ್ಕೆ ಮಾಡಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts