ಮಂಗಳೂರು: ನಗರದ ಕಾವೂರು ಉರುಂದಾಡಿ ಗುಡ್ಡೆಯಲ್ಲಿ ಶನಿವಾರ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ಮಾಡಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಪರಿಕರಗಳನ್ನು ವಶಕ್ಕೆ ಪಡೆದಿದ್ದು ಸಂಘಟಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹಬ್ಬಗಳ ವೇಳೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಜೆ ನಿಷೇಧಿಸಿ ಪೊಲೀಸ್ ಆಯುಕ್ತರು ಮಾರ್ಗಸೂಚಿ ಬಿಡುಗಡೆ ಮಾಡಿದ್ದರು.ಆದರೂ ಡಿಜೆ ಸಂಗೀತ ಆಯೋಜಿಸಲಾಗಿತ್ತು.
ದೂರು ಬಂದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಕಾವೂರು ಠಾಣೆ ಪೊಲೀಸರು ಪರಿಕರಗಳನ್ನು ವಶ ಪಡಿಸಿಕೊಂಡಿದ್ದಾರೆ.