ವಿಟ್ಲ: ಅಡ್ಡದ ಬೀದಿ ಮನೆಯ ಬಾವಿಯಲ್ಲಿ ರವಿ ಜೋಶಿ (68) ಎಂಬವರ ಶವ ಪತ್ತೆಯಾಗಿದೆ.
ಯಕ್ಷಗಾನ ಕಲಾವಿದ ರಸಿಕ ರತ್ನ ಗೋಪಾಲಕೃಷ್ಣ ಜೋಶಿಯವರ ಪುತ್ರರಾದ ಇವರ ಕರ್ನಾಟಕ ಬ್ಯಾಂಕ್‌ನ ನಿವೃತ್ತ ಉದ್ಯೋಗಿಯಾಗಿದ್ದರು.
ಮೃತರು ಪತ್ನಿ, ಒಂದು ಹೆಣ್ಣು ಮಗಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.