ಪುತ್ತೂರು: ಆರೋಪಿ ಕೃಷ್ಣ ರಾವ್ ಬಂಧನವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಶನಿವಾರ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈ, ಸಂತ್ರಸ್ತೆಯ ತಾಯಿ ಜೊತೆಗೆ ಮಾತನಾಡಿ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಎಸ್ಪಿ ಅವರಿಗೆ ತಿಳಿಸಿದ ತಕ್ಷಣ, ತಂಡ ರಚಿಸಿ ಆರೋಪಿ ಪತ್ತೆಗೆ ಮುಂದಾಗಿದ್ದರು. ಅದರಂತೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಬಂಧಿಸಲಾಗಿದೆ.
ಇಂತಹ ವಿಚಾರಗಳನ್ನು ರಾಜಕೀಯಕ್ಕೆ ಬಳಸಬಾರದು. ಸಂತ್ರಸ್ತೆ ಹಾಗೂ ಮಗುವಿನ ಭವಿಷ್ಯದ ದೃಷ್ಟಿಯಿಂದ ಆಲೋಚಿಸಬೇಕಾಗಿದೆ. ನನ್ನ ಜಾಗದಲ್ಲಿ ಬೇರೆ ಯಾವುದೇ ಪಕ್ಷದವರಿದ್ದರೂ ರಾಜಕೀಯವನ್ನೇ ಮಾಡುತ್ತಿದ್ದರು. ಆದರೆ ನಾನು ಹಾಗೇ ಮಾಡಿಲ್ಲ. ಇಬ್ಬರು ಒಂದಾಗಿ ಬಾಳಬೇಕೆಂಬುದೇ ನಮ್ಮ ಆಶಯ ಎಂದರು.
ಅರುಣ್ ಕುಮಾರ್ ಪುತ್ತಿಲ ಅವರ ಹೇಳಿಕೆಯಿಂದ ಬೇಸರವಾಗಿದೆ. ಅರಿತು ಮಾತನಾಡಿದ್ದರೆಯೋ ಗೊತ್ತಿಲ್ಲ. ನಾನು ಇದನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ. ಆದರೆ ಈ ಹುಡುಗ ಪುತ್ತಿಲ ಅವರ ಜೊತೆ ಕೆಲಸ ಮಾಡಿದವ. ಇದಕ್ಕೆ ಸಂಬಂಧಪಟ್ಟ ಫೊಟೋವೊಂದು ನಿನ್ನೆ ವೈರಲ್ ಆಗುತ್ತಿತ್ತು. ಆದರೆ ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಇಬ್ಬರನ್ನು ಒಂದಾಗಿಸುವ ಕೆಲಸವನ್ನಷ್ಟೇ ನಾವು ಮಾಡಬೇಕಾಗಿದೆ ಎಂದರು.
ಕಾವು ಹೇಮನಾಥ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ನಿಹಾಲ್ ಶೆಟ್ಟಿ, ಜಯಪ್ರಕಾಶ್ ಬದಿನಾರು ಮೊದಲಾದವರು ಉಪಸ್ಥಿತರಿದ್ದರು.