ಅಪರಾಧ

ಅನುಮಾನಕ್ಕೆ ಎಡೆ ನೀಡಿದ ಗೋ ಸಾಗಾಟ!ಪ್ರಕರಣಕ್ಕೆ ತೆರೆ ಎಳೆದ ಸಂಪ್ಯ ಪೊಲೀಸರು!

ಆರ್ಲಪದವು ಬಳಿ ಜಾನುವಾರುಗಳನ್ನು ಲಾರಿಗೆ ತುಂಬಿಸುತ್ತಿದ್ದ ವೇಳೆ ಅನುಮಾನಗೊಂಡು ಜಮಾಯಿಸಿದ ಹಿಂದು ಸಂಘಟನೆ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಸಂಪ್ಯ ಠಾಣೆಯ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು:ನಾಗಮಂಗಲದ ಗೋಶಾಲೆಯೊಂದಕ್ಕೆ ಕೊಂಡೊಯ್ಯಲೆಂದು ಆರ್ಲಪದವು ಬಳಿ ಜಾನುವಾರುಗಳನ್ನು ಲಾರಿಗೆ ತುಂಬಿಸುತ್ತಿದ್ದ ವೇಳೆ ಅನುಮಾನಗೊಂಡು ಜಮಾಯಿಸಿದ ಹಿಂದು ಸಂಘಟನೆ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಸಂಪ್ಯ ಠಾಣೆಯ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದರು. ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳಿದ್ದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.ಬೆಳ್ತಂಗಡಿ ತಾಲೂಕಿನ ಉಜಿರೆ ಗೋಶಾಲೆ, ಕೇರಳದ ಪೆರ್ಲ ಸಮೀಪದ ಬಜಕೂಡ್ಲುವಿನ ಗೋಶಾಲೆಯಿಂದ ಮಲೆನಾಡು ಗಿಡ್ಡ ತಳಿಯ ಜಾನುವಾರುಗಳನ್ನು ನಾಗಮಂಗಲದ ಶ್ರೀಲಕ್ಷ್ಮೀ ಗೋಶಾಲೆಗೆ ಸಾಗಾಟ ಮಾಡುವ ಕಾರ್ಯ ನಡೆಯುತ್ತಿತ್ತು.ಎರಡೂ ಗೋಶಾಲೆಗಳಿಂದ ಗೋವುಗಳನ್ನು ಪಾಣಾಜೆ ಗ್ರಾಮದ ಆರ್ಲಪದವಿಗೆ ತರಲಾಗಿತ್ತು.ಅಲ್ಲಿ ಜಾನುವಾರುಗಳನ್ನು ಲಾರಿಗೆ ತುಂಬಿಸುತ್ತಿದ್ದುದರಿಂದ ಅನುಮಾನಗೊಂಡು ಹಿಂದು ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಸಂಪ್ಯ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ ವೇಳೆ, ಎಲ್ಲಾ ಜಾನುವಾರುಗಳನ್ನು ನಾಗಮಂಗಲದ ಗೋಶಾಲೆಗೆ ಕೊಂಡೊಯ್ಯುತ್ತಿರುವ ಕುರಿತು ಅಧಿಕೃತ ದಾಖಲೆಗಳು ಸಾಗಾಟಗಾರರಲ್ಲಿ ಇರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts