pashupathi
ಅಪರಾಧ

ಕಡಬ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಯತ್ನ ಪ್ರಕರಣ: ಸಹೋದರ ಮೃತ್ಯು!!

tv clinic
ಕಡಬ: ತಮ್ಮನೇ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅಣ್ಣ ಚಿಕಿತ್ಸೆ ಫಲಿಸದೆ ಸೋಮವಾರ (ಜೂ.9) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಡಬ: ತಮ್ಮನೇ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅಣ್ಣ ಚಿಕಿತ್ಸೆ ಫಲಿಸದೆ ಸೋಮವಾರ (ಜೂ.9) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

akshaya college

ದ.ಕ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಕೋಡಿಂಬಾಳ ಸಮೀಪದ ಕೋರಿಯರ್ ರೈಲು ಟ್ರ್ಯಾಕ್ ಸಮೀಪ ಜೂ.8 ರಂದು ಈ ಘಟನೆ ನಡೆದಿತ್ತು. ತಮ್ಮನ್ನೇ ತನ್ನ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನಿಸಿದ್ದ.

ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹನುಮಪ್ಪ (42) ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. ಸಾವಿನ ಬಳಿಕ ಪೊಲೀಸರು ಕೊಲೆ ಯತ್ನ ಬದಲು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹನುಮಪ್ಪ ಸಹೋದರ ನಿಂಗಪ್ಪ (21) ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈ ಮೊದಲು ರೈಲ್ವೇ ಪೊಲೀಸರು ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಇದೀಗ ಗಾಯಾಳುವಿನ ಸಾವಿನ ಬಳಿಕ ಕೊ*ಲೆ ಪ್ರಕರಣವಾಗಿ ಪ್ರಕರಣ ಬದಲಾಗಿದೆ.

ಸೋಮವಾರ (ಜೂ. 9) ಮಂಗಳೂರು ರೈಲ್ವೇ ಪೊಲೀಸರು ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ನಡೆಸಿದ್ದಾರೆ. ಮಂಗಳೂರು ವಿಭಾಗದ ರೈಲ್ವೇ ಪೊಲೀಸ್ ಇನ್ಸೆಕ್ಟ‌ರ್ ಜಯಾನಂದ, ಎಎಸ್‌ಐ ಮಧುಚಂದ್ರ, ವಿಧಿವಿಜ್ಞಾನ ತಂಡ ಹಾಗೂ ರೈಲ್ವೆ ಪೊಲೀಸರಿಂದ ತನಿಖೆ ಆರಂಭಗೊಂಡಿದೆ.

ಮಾಹಿತಿಯ ಪ್ರಕಾರ ಪುತ್ತೂರಿನಲ್ಲಿ ರೈಲು ಹತ್ತಿದ ಇಬ್ಬರೂ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಮಧ್ಯಾಹ್ನ ಇಬ್ಬರೂ ಇಳಿದಿದ್ದರು. ಕೊಲೆಗೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ತಮ್ಮ ಸುತ್ತಮುತ್ತ ಮನೆಗಳಿರುವ ಕಾರಣ ರೈಲು ಮಾರ್ಗದಲ್ಲಿ ಮುಂದಕ್ಕೆ ಸುಮಾರು ಒಂದು ಕಿ.ಮೀ ನಡೆದುಕೊಂಡು ಹೋಗಿ ಕೋರಿಯಾರ್ ಪ್ರದೇಶಕ್ಕೆ ತಲುಪಿ ಪೆಟ್ರೋಲ್‌ ಮಿಶ್ರಿತ ಡೀಸೆಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಹೇಳಲಾಗಿದೆ. ಪೊಲೀಸರ ತನಿಖೆಯಲ್ಲಿ ಹೆಚ್ಚಿನ ವಿವರ ಸಿಗಲಿದೆ.

ಅಣ್ಣನಿಗೆ ವಿಪರೀತ ಕುಡಿತದ ಚಟವಿತ್ತು. ಆತನ ಕಾಟದಿಂದಲೇ 14 ವರ್ಷಗಳ ಹಿಂದೆ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ನಮ್ಮ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಈತ ಯತ್ನಿಸಿದ್ದ. ಇಂದು ನನ್ನ ಜೊತೆಯೂ ಗಲಾಟೆ ಮಾಡಿದ. ಈ ಎಲ್ಲಾ ಹಿಂಸೆಯಿಂದ ರೋಸಿಹೋಗಿ ಅವನನ್ನು ಕೊಲೆ ಮಾಡಲು ನಿರ್ಧರಿಸಿದ್ದೆ. ಎಂದು ಕಡಬ ಪೊಲೀಸರ ಮುಂದೆ ಆರೋಪಿ ನಿಂಗಪ್ಪ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts