ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಬಾಡಿಗೆಗೆಂದು ಹೋದ ಸಾಲ್ಮರ ಸೂತ್ರ ಬೆಟ್ಟು ನಿವಾಸಿ ಆಟೋ ರಿಕ್ಷಾ ಚಾಲಕ ಲೋಕೇಶ ಎಂಬುವವರು ರಿಕ್ಷಾ ಸಹಿತ ನಾಪತ್ತೆಯಾಗಿರುವ ಘಟನೆ ಎ.21 ರಂದು ನಡೆದಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಬೆಳಗ್ಗೆ 5.30ಕ್ಕೆ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಬಾಡಿಗೆ ಎಂದು ಹೋದ ವ್ಯಕ್ತಿ ವಾಪಾಸು ಬಂದಿಲ್ಲ. ಲೋಕೇಶ ಅವರ ಪತ್ನಿ ಸುವರ್ಣ ಬಿ.ಎಸ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.