Gl harusha
ಅಪರಾಧ

ಜನಿವಾರ ಕಿತ್ತೆಸೆದ ಪ್ರಕರಣ| ಒಗ್ಗಟ್ಟಿನ ಹೋರಾಟಕ್ಕೆ ಸಚ್ಚಿದಾನಂದ ಮೂರ್ತಿ ತೃಪ್ತಿ

ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ಕಿತ್ತೆಸೆದ ಘಟನೆ ವಿರುದ್ಧ ಬ್ರಾಹ್ಮಣ ಸಂಘಟನೆಗಳು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಿದ್ದು ಸ್ವಾಗತಾರ್ಹ, ಇನ್ನು ಮುಂದೆ ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ ನೀಡಿದ ಎಚ್ಚರಿಕೆಯ ಗಂಟೆ ಇದು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಚ್‌.ಎಸ್.ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ಕಿತ್ತೆಸೆದ ಘಟನೆ ವಿರುದ್ಧ ಬ್ರಾಹ್ಮಣ ಸಂಘಟನೆಗಳು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಿದ್ದು ಸ್ವಾಗತಾರ್ಹ, ಇನ್ನು ಮುಂದೆ ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ ನೀಡಿದ ಎಚ್ಚರಿಕೆಯ ಗಂಟೆ ಇದು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಚ್‌.ಎಸ್.ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

‘ಸಿಇಟಿ ವೇಳೆ ಜನಿವಾರ ತೆಗೆಯಬೇಕು ಎಂಬ ಯಾವ ನಿಯಮವನ್ನೂ ರೂಪಿಸಿರಲಿಲ್ಲ. ಜಾರಿಯಲ್ಲಿ ಇಲ್ಲದ ಕಾನೂನನ್ನು ಅನವಶ್ಯಕವಾಗಿ ಜಾರಿಗೆ ತರುವ ಪ್ರಯತ್ನವನ್ನು ಕೆಲವರು ಮಾಡಿದ್ದು ಇಡೀ ಸರ್ಕಾರವೇ ಅದನ್ನು ಮಾಡಿಸಿದೆ ಎಂಬ ಭಾವನೆ ಮೂಡುವಂತೆ ಮಾಡಿತು. ತಪ್ಪು ಎಸಗಿದವರಿಗೆ ಸೂಕ್ತ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಂಡರೆ ಮಾತ್ರ ಇಂತಹ ಕೃತ್ಯ ಮತ್ತೆ ಮರುಕಳಿಸುವುದು ತಪ್ಪಬಹುದು’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಘಟನೆ ನಡೆದ ತಕ್ಷಣ ನಾನು ಉಗ್ರವಾಗಿ ಖಂಡಿಸಿದ್ದೆ. ರಾಜ್ಯದಾದ್ಯಂತ ವಿವಿಧ ಬ್ರಾಹ್ಮಣ ಸಂಘಟನೆಗಳು ಒಗ್ಗಟ್ಟಾಗಿ ಎರಡು ದಿನ ಪ್ರತಿಭಟನೆ ನಡೆಸಿದ್ದು ಬಹಳ ದೊಡ್ಡ ಬೆಳವಣಿಗೆ. ಬ್ರಾಹ್ಮಣರು ಒಗ್ಗಟ್ಟಿನಿಂದ ಇರಬೇಕು ಎಂಬುದನ್ನು ನಾನು ಮೊದಲಿನಿಂದಲೂ ಹೇಳುತ್ತ ಬಂದಿದ್ದೆ. ಈಗ ಇಡೀ ಸಮುದಾಯಕ್ಕೆ ಎದುರಾದ ಸವಾಲನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ ನಮ್ಮ ಒಗ್ಗಟ್ಟಿನಿಂದ ಬರುವಂತಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಿಸಕೂಡದು. ಒಗ್ಗಟ್ಟಿನಲ್ಲಿ ಬಲ ಇದೆ ಎಂಬುದನ್ನು ಬ್ರಾಹ್ಮಣ ಸಮುದಾಯ ಮತ್ತೆ ಮತ್ತೆ ಸಾಬೀತುಪಡಿಸಿ ಸಮಾಜದ ಮೇಲಾಗುವ ದೌರ್ಜನ್ಯ ಹತ್ತಿಕ್ಕುವಲ್ಲಿ ಶ್ರಮಿಸಬೇಕು’ ಎಂದು ಅವರು ಕೇಳಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts