ಕುಂಬಳೆ ರಾ ಹೆದ್ದಾರಿಯ ಮೊಗ್ರಾಲು ಸೇತುವೆ ಬಳಿ ಪಿಕಪ್ ವ್ಯಾನ್ ಮತ್ತು ಸ್ಕೂಟರ್ ಪರಸ್ಪರ ಡಿಕ್ಕಿಯಾಗಿ ಬಟ್ಟೆ ವ್ಯಾಪಾರಿ ಮೃತಪಟ್ಟಿದ್ದಾರೆ. ಉಪ್ಪಳ ಮುಸೋಡಿ ನಿವಾಸಿ ಹಾಗೂ, ಉಪ್ಪಳ ಪೇಟೆಯ ಐಸೋಡ್ ಬಟ್ಟೆ ಮಳಿಗೆಯ ಮಾಲಕ ಅಬ್ದುಲ್ ಅಸೀಝ್ (48) ಮೃತ ವ್ಯಕ್ತಿಯಾಗಿದ್ದಾರೆ
ಬುಧವಾರ ಸಂಜೆ ಮೊಗ್ರಾಲ್ ಸೇತುವೆ ಸಮೀಪ ಅವಘಡ ಸಂಭವಿಸಿತು. ಅಫಘಾತದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಅಬ್ದಲ್ ಅಝೀಜ್ ಅವರನ್ನು ಕುಂಬಳೆ ಸಹಕಾರಿ ಆಸ್ಪತ್ರೆಯಿಂದ ಮತ್ತೆ ಮಂಗಳೂರಿಗೆ ಒಯ್ಯಲಾಯಿತು. ಈ ಮಧ್ಯೆ ಮರಣ ಸಂಭವಿಸಿತು. ಈ ಕಾರಣದಿಂದ ಮೃತದೇಹವನ್ನು ಮಂಗಲ್ಪಾ ಸರಕಾರಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ರಂಝಾನ್ ಉಪವಾಸದ ದಿನದಲ್ಲಿ ಮುಸ್ಸಂಜೆ ವೇಳೆಗೆ ವ್ಯಾಪಾರಿಯೊಬ್ಬರ ನಿಧನ ಉಪ್ಪಳದ ವ್ಯಾಪಾರೀ ಸಮುದಾಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಕುಂಬಳೆ-.ಮಂಜೇಶ್ವರ ನಡುವೇ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ತನ್ನಿಮಿತ್ತ ಪದೇ, ಪದೇ ಹೆದ್ದಾರಿ ಸಂಚಾರ ಪರ ಬದಲಾಯಿಸಲಾಗುತ್ತಿದೆ.
ಇದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾಸರಗೋಡು -ತಲಪ್ಪಾಡಿ ನಡುವಣ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ನೂತನ ರಸ್ತೆ ಅನೇಕರನ್ನು ಬಲಿ ಪಡೆದಿದೆ.