Gl harusha
ಅಪರಾಧ

ರೌಡಿ ಶೀಟರ್’ಗೆ ಗುಂಡಿನ ರುಚಿ ತೋರಿಸಿದ ಲೇಡಿ ಇನ್ಸ್ ಪೆಕ್ಟರ್!

ಕೊಲೆಯತ್ನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ಓಡಿಹೋಗಲು ಪ್ರಯತ್ನಿಸಿದ್ದ ಆರೋಪಿ ಕಾಲಿಗೆ ಗುಂಡು ಹೊಡೆದು ಭದ್ರಾವತಿ ಪೇಪರ್‌ಟೌನ್‌ ಪೊಲೀಸ್ ಠಾಣೆಯ ಲೇಡಿ ಇನ್ಸೆಕ್ಟ‌ರ್ ನಾಗಮ್ಮ ಬಂಧಿಸಿದ ಘಟನೆ ಮಂಗಳವಾರ (ಮಾ.25) ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

srk ladders
Pashupathi
Muliya

ಕೊಲೆ ಯತ್ನ ಪ್ರಕರಣದರಲ್ಲಿ ರೌಡಿ ಶೀಟರ್ ಕಡೇಕಲ್ ಅಬೀದ್ ತಲೆ ಮರೆಸಿಕೊಂಡಿದ್ದ. ಕಳೆದ ಒಂದು ತಿಂಗಳಿನಿಂದ ಈತನಿಗಾಗಿ ಪೊಲೀಸರು ಶೋಧಿಸುತ್ತಿದ್ದರು. ಮಂಗಳವಾರ ಈತನ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ ಇನ್ಸೆಕ್ಟ‌ರ್ ನಾಗಮ್ಮ ನೇತೃತ್ವದ ತಂಡ ಬಂಧಿಸಲು ಯತ್ನಿಸಿತು. ಈ ಸಂದರ್ಭ ಕಡೇಕಲ್ ಅಬೀದ್ ಪೊಲೀಸ್‌ ಸಿಬ್ಬಂದಿ ಅರುಣ್ ಮೇಲೆ ದಾಳಿ ನಡೆಸಿದ್ದಾನೆ.

ಈ ವೇಳೆ ಇನ್ಸೆಕ್ಟ‌ರ್ ನಾಗಮ್ಮ, ಕಡೇಕಲ್ ಅಬೀದ್‌ನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಪೊಲೀಸ್‌ ಸಿಬ್ಬಂದಿ ಅರುಣ್ ಕುಮಾರ್ ಮತ್ತು ಕಡೇಕಲ್ ಅಬೀದ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕೊಲೆ, ಕೊಲೆ ಯತ್ನ ದರೋಡೆ ಸೇರಿ 20ಕ್ಕೂ ಅಧಿಕ ಪ್ರಕರಣಗಳು ಈತನ ಮೇಲಿವೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts