pashupathi
ಅಪರಾಧ

ಸುಳ್ಯ:  ಗ್ಯಾಸ್ ತುಂಬಿದ ಲಾರಿ ಪಲ್ಟಿ, ಚಾಲಕನಿಗೆ ಗಂಭೀರ ಗಾಯ..! ರಸ್ತೆಯಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದ ಗ್ಯಾಸ್‌ ಸಿಲಿಂಡರ್ ಗಳು..! 

tv clinic
ತಡರಾತ್ರಿಯಲ್ಲಿ ಭಾರತ್ ಗ್ಯಾಸ್ ಸಿಲಿಂಡ‌ರ್ ಸರಬರಾಜು ಲಾರಿಯೊಂದು ಗಂಭೀರ ಅಪಘಾತಕ್ಕೀಡಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯ ತಾಲೂಕು ಕುಂಬರ್ಚೋಡು ತಿರುವಿನಲ್ಲಿ ತಡರಾತ್ರಿಯಲ್ಲಿ ಭಾರತ್ ಗ್ಯಾಸ್ ಸಿಲಿಂಡ‌ರ್ ಸರಬರಾಜು ಲಾರಿಯೊಂದು ಗಂಭೀರ ಅಪಘಾತಕ್ಕೀಡಾಗಿದೆ.

akshaya college

ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಲಾರಿ ತಿರುವಿನ ಬಳಿ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯಗಳಾದವು. ಸ್ಥಳೀಯರ ಸಹಾಯದಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದೂ ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.

ಅಪಘಾತದ ಕಾರಣವಾಗಿ ಸ್ಥಳದಲ್ಲಿ ಅಲ್ಪ ಸಮಯ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿರುತ್ತದೆ. ಲಾರಿಯಲ್ಲಿ ಇದ್ದ ಗ್ಯಾಸ್ ಸಿಲಿಂಡರ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ ಮತ್ತು ಅಲ್ಲೆ ಬದಿಯ ಕಂದಕಕ್ಕೂ ಉರುಳಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts